ಟಾಪ್ 10 ನ್ಯೂಸ್
ಡಿನ್ನರ್ ಕಾರ್ಯಕ್ರಮದಲ್ಲಿ ಉಕ್ರೇನ್ ಯುದ್ಧ ನಿಲ್ಲಿಸುವಂತೆ ರಷ್ಯಾ ಅಧ್ಯಕ್ಷರಿಗೆ ಮೋದಿ ಮನವಿ

ಮಾಸ್ಕೋ: ಡಿನ್ನರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಉಕ್ರೇನ್ ವಿಚಾರವನ್ನು ಚರ್ಚಿಸಿದರು.
ಎರಡು ದಿನ ರಷ್ಯಾಗೆ ಪ್ರವಾಸದ ನಿಮಿತ್ತ ರಷ್ಯಾ ಅಧ್ಯಕ್ಷರ ಭೇಟಿಯಲ್ಲಿರುವ ನರೇಂದ್ರ ಮೋದಿ ನಿನ್ನೆ (ಜುಲೈ 08)ರ ರಾತ್ರಿ ನಡೆದ ಡಿನ್ನರ್ ಕಾರ್ಯಕ್ರಮದಲ್ಲಿ ಅನೌಪಚಾರಿಕ ಮಾತುಕತೆಯಾದರೂ ಮೋದಿ ಅವರು ಉಕ್ರೇನ್ ಯುದ್ಧ ನಿಲ್ಲಿಸುವಂತೆ ಪುಟಿನ್ ಅವರಿಗೆ ನೇರವಾಗಿ ಮನವಿ ಮಾಡಿದರು.
ಯುದ್ಧದಿಂದ ಯಾವ ಪರಿಹಾರವೂ ಸಿಗದು ಎಂಬ ವಿಚಾರವನ್ನು ಪುಟಿನ್ ಅವರಿಗೆ ಮೋದಿ ಈ ಸಂದರ್ಭದಲ್ಲಿ ತಿಳಿಸಿದರು ಎನ್ನಲಾಗಿದೆ. ರಾಷ್ಟ್ರಗಳ ಸಾರ್ವಭೌಮತೆಯನ್ನೂ ಒಳಗೊಂಡಂತೆ ವಿಶ್ವಸಂಸ್ಥೆಯ ಒಪ್ಪಂದವನ್ನು ಭಾರತ ಸದಾ ಕಾಲ ಗೌರವಿಸುತ್ತದೆ. ರಣರಂಗದಲ್ಲಿ ಯಾವ ಪರಿಹಾರವನ್ನೂ ಕಂಡುಕೊಳ್ಳಲು ಆಗದು. ಸಂವಾದ ಮತ್ತು ರಾಜತಾಂತ್ರಿಕತೆಯೇ ಸರಿಯಾದ ದಾರಿ ಎಂದು ಮೋದಿ ಪುಟಿನ್ ಅವರಿಗೆ ಈ ಸಂದರ್ಭದಲ್ಲಿ ಮನವರಿಕೆ ಮಾಡಿದರು.
Poll (Public Option)

Post a comment
Log in to write reviews