ಮೋದಿ 3.0 : ನೂತನ ಸರ್ಕಾರದಲ್ಲಿ ಯಾರಿಗೆಲ್ಲಾ ಒಲಿಯಿತು ಮಂತ್ರಿಗಿರಿ..? ಇಲ್ಲಿದೆ ವಿವರ
ನವದೆಹಲಿ: ಹೊಸ ಸಮ್ಮಿಶ್ರ ಸರ್ಕಾರದ 71 ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ರಾಷ್ಟ್ರಪತಿ ಭವನದ ಎದುರು ನಡೆದ ಅದ್ದೂರಿ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅವರಲ್ಲಿ ಮೂವತ್ತು ಕ್ಯಾಬಿನೆಟ್ ಮಂತ್ರಿಗಳು, ಐದು ಸ್ವತಂತ್ರ ಉಸ್ತುವಾರಿ ಮತ್ತು 36 ರಾಜ್ಯ ಸಚಿವರು. ಪ್ರಮಾಣವಚನ ಸ್ವೀಕರಿಸಿದ್ದಾರೆ. ಜವಾಹರ್ ಲಾಲ್ ನೆಹರೂ ಅವರ ನಂತರ ಸತತವಾಗಿ ಮೂರನೇಯ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕಸಿದ ನರೇಂದ್ರ ಮೋದಿ ಅವರು ಭಾರತದ ರಾಜಕೀಯ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನೇ ಬರೆದರು.
ಮೋದಿ 3.0 ಸಚಿವರ ಪಟ್ಟಿ : ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಜೆಪಿ ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್, ನಿರ್ಮಲಾ ಸೀತಾರಾಮನ್, ಎಸ್ ಜೈಶಂಕರ್, ಮನೋಹರ್ ಲಾಲ್, ಖಟ್ಟರ್ ಧಮೇಂದ್ರ ಪ್ರಧಾನ್, ಸರ್ಬಾನಂದ ಸೋನೊವಾಲ್, ಕಿರಣ್ ರಿಜಿಜು, ವೀರೇಂದ್ರ ಕುಮಾರ್, ಜ್ಯೋತಿರಾದಿತ್ಯ ಸಿಂಧಿಯಾ, ಹರ್ದೀಪ್ ಸಿಂಗ್ ಪುರಿ, ಎಚ್ಡಿ ಕುಮಾರಸ್ವಾಮಿ ಜನತಾದಳ (ಜಾತ್ಯತೀತ), ಲಾಲನ್ ಸಿಂಗ್ ಜನತಾ ದಳ (ಯುನೈಟೆಡ್) ಚಿರಾಗ್ ಪಾಸ್ವಾನ್ (ಲೋಕ ಜನಶಕ್ತಿ ಪಕ್ಷ) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಯಾವ ಪಕ್ಷಗಳಿಗೆ ಎಷ್ಟು ಸಚಿವ ಸ್ಥಾನ?
ಬಿಜೆಪಿ - 61
ಟಿಡಿಪಿ - 02
ಜೆಡಿಯು - 02
ಜೆಡಿಎಸ್ - 01
ಎಲ್ಜೆಪಿ - 01
ಎಚ್ಎಎಂಎಸ್ - 01
ಆರ್ಎಲ್ಡಿ - 01
ಶಿವಸೇನೆ (ಶಿಂಧೆ) - 01
ಆರ್ಪಿಐ - 01
ಅಪ್ನಾ ದಳ - 01
ರಾಜ್ಯದ ಐವರಿಗೆ ಸ್ಥಾನ
ಕ್ಯಾಬಿನೆಟ್ ದರ್ಜೆ :
ನಿರ್ಮಲಾ ಸೀತಾರಾಮನ್
ಎಚ್.ಡಿ.ಕುಮಾರಸ್ವಾಮಿ
ಪ್ರಲ್ಹಾದ ಜೋಶಿ
ರಾಜ್ಯ ಖಾತೆ :
ಶೋಭಾ ಕರಂದ್ಲಾಜೆ
ವಿ. ಸೋಮಣ್ಣ
5 ಮಾಜಿ ಮುಖ್ಯಮಂತ್ರಿಗಳಿಗೆ ಒಲಿದ ಸಚಿವ ಸ್ಥಾನ :
ಎಚ್.ಡಿ.ಕುಮಾರಸ್ವಾಮಿ (ಕರ್ನಾಟಕ)
ಸರ್ಬಾನಂದ ಸೋನೊವಾಲ್ (ಅಸ್ಸಾಂ)
ಮನೋಹರಲಾಲ್ ಖಟ್ಟರ್ (ಹರಿಯಾಣ)
ಜಿತನ್ ರಾಮ್ ಮಾಂಝಿ (ಬಿಹಾರ)
ಶಿವರಾಜ್ ಸಿಂಗ್ ಚೌಹಾಣ್ (ಮಧ್ಯಪ್ರದೇಶ).
Post a comment
Log in to write reviews