
ಬೆಂಗಳೂರು: ಬಿಜೆಪಿ ಆಡಳಿತಾವಧಿಯಲ್ಲಿ ಏನೆಲ್ಲ ಹಗರಣಗಳು ನಡೆದಿವೆ ಅಂತ ಒಂದು ಪಟ್ಟಿಯನ್ನು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸದನದಲ್ಲಿ ಓದಿದರು.
ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸದನದ ಹೊರಗೆ ಮತ್ತು ಒಳಗೆ ಆವೇಶದಲ್ಲಿ ಮಾತಾಡುತ್ತಾರೆ. ಬಿಜೆಪಿ ಶಾಸಕರು ಕಲಾಪ ನಡೆಯದಂತೆ ಒಂದೇ ಸಮನೆ ಪ್ರತಿಭಟನೆ ನಡೆಸುತ್ತಿದ್ದ ಕಾರಣ ರೊಚ್ಚಿಗೆದ್ದ ಅವರು ಬಿಜೆಪಿ ಆಡಳಿತಾವಧಿಯಲ್ಲಿ ಏನೆಲ್ಲ ಹಗರಣಗಳು ನಡೆದಿವೆ ಅಂತ ಒಂದು ಪಟ್ಟಿಯನ್ನು ಸದನದಲ್ಲಿ ಓದಿದರು. ಅವರು ಸಿಟ್ಟಿನಲ್ಲಿ ಅರೋಪ ಪಟ್ಟಿ ಓದುತ್ತಿದ್ದರೆ ಬಿಜೆಪಿ ಶಾಸಕರು ಘೋಷಣೆ ಕೂಗುವುದನ್ನು ಮುಂದುವರಿಸಿದರು. ಪಟ್ಟಿ ಓದುವುದನ್ನು ಮುಗಿಸದ ಬಳಿಕವೂ ಅವರು ಬಿಜೆಪಿ ಶಾಸಕರ ವಿರುದ್ಧ ಕೈ ಮಾಡಿ ಒಂದೇ ಸಮ ಏನನ್ನೋ ಹೇಳಿದರು. ಪ್ರಾಯಶಃ ಅವರ ಮೈಕ್ ಆಫ್ ಆಗಿತ್ತು ಅನಿಸುತ್ತೆ. ಹಾಗಾಗಿ ಏನು ಹೇಳುತ್ತಿದ್ದಾರೆ ಅಂತ ಕೇಳಿಸಲ್ಲ. ಸಭಾಧ್ಯಕ್ಷರು, ಈಶ್ವರ್ ನಿಲ್ಲಿಸಿ ಶರತ್ ಬಚ್ಚೇಗೌಡ ಮಾತಾಡುತ್ತಿದ್ದಾರೆ, ಅವರಿಗೆ ಮಾತಾಡಲು ಬಿಡಿಅ ಅಂತ ಹೇಳಿದರೂ ಈಶ್ವರ್ ಆವೇಶಕ್ಕೆ ಒಳಗಾದವರ ಹಾಗೆ ಕೂಗುವುದನ್ನು ಮುಂದುವರಿಸುತ್ತಾರೆ. ಕೊನೆಗೆ ಅವರ ಪಕ್ಷ ಪಕ್ಷದ ಇಬ್ಬರು ಸದಸ್ಯರು ಬಂದು ಸಮಾಧಾನಪಡಿಸುತ್ತಾರೆ.
Poll (Public Option)

Post a comment
Log in to write reviews