ಶಾಲಾ ಮಕ್ಕಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತಂತ್ರಜ್ಞಾನದ ದುರ್ಬಳಕೆ: ಪೊಷಕರಿಗೆ ಪತ್ರ.

ಇತ್ತೀಚೆಗೆ ಶಾಲಾ ಮಕ್ಕಳು ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಹಿನ್ನಲೆ ಖಾಸಗಿ ಶಾಲಾ ಒಕ್ಕೂಟ ಪೋಷಕರಿಗೆ ಎಚ್ಚರಿಕೆ ಪತ್ರವನ್ನು ಬರೆದಿದೆ.
ಶಾಲಾ ಮಕ್ಕಳು ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದಾರೆ. ಇದು ಅಪಾಯಕ್ಕೆ ದಾರಿ ಮಾಡಿಕೊಡಬಹುದಾಗಿದ್ದು, ಮಕ್ಕಳ ಬಗ್ಗೆ ಎಚ್ಚರ ವಹಿಸಿ. ಹಾಗೆಯೇ ವಿದ್ಯಾರ್ಥಿಗಳು ತಂತ್ರಜ್ಞಾನವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಪ್ರಾಪ್ತ ವಿದ್ಯಾರ್ಥಿಗಳು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ, ಬೇರೆ ಬೇರೆ ಹೆಸರುಗಳನ್ನಿಟ್ಟು ಪೋಷಕರಿಗೆ ಗೊತ್ತಿಲ್ಲದೆ ಆಕ್ಟೀವ್ ಆಗಿದ್ದಾರೆ. ಮಕ್ಕಳು ಇತರೆ ಸಹಪಾಠಿಯೊಂದಿಗೆ ಗುಪ್ತ ಸಂಪರ್ಕ, ಪ್ರೀತಿ ಪ್ರೇಮಗಳು, ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬೈದಾಡುವುದು, ದ್ವೇಷ ಸಾಧಿಸುವುದು, ಅವಮಾನಿಸುವ ಪ್ರಸಂಗ ಇತ್ತೀಚೆಗೆ ಇವರಲ್ಲಿ ಹೆಚ್ಚಾಗುತ್ತಿದೆ. ಹಾಗೆಯೇ 5-6ನೇ ತರಗತಿ ವಿದ್ಯಾರ್ಥಿಗಳು ಆನ್‌ಲೈನ್ ವ್ಯಾಪಾರಗಳು, ಆನ್‌ಲೈನ್ ಆಟಗಳು, ಆನ್‌ಲೈನ್ ಜೂಜಾಟ, ಮುಂತಾದವುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗೆ ತಂದೆ ತಾಯಿಗೆ ಗೊತ್ತಿಲ್ಲದೆ ತಮ್ಮ ಮೊಬೈಲ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಇಂಥ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಮಕ್ಕಳ ಬಗ್ಗೆ ಜಾಗರೂಕರಾಗಿರಿ ಎಂದು ಪೊಷಕರಿಗೆ ಪತ್ರ ಬರೆಯುವ ಮೂಲಕ ಎಚ್ಚರಿಕೆ ಕೊಟ್ಟಿದೆ.
Poll (Public Option)

Post a comment
Log in to write reviews