ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿರುವ BAPS ಸ್ವಾಮಿನಾರಾಯಣ ಮಂದಿರವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಇನ್ನೂ ಕಳೆದ 10ದಿನಗಳ ನ್ಯೂಯಾರ್ಕ್ನ ಬಿಎಪಿಎಸ್ ಮಂದಿರದಲ್ಲಿ ಇದೇ ರೀತಿಯ ವಿಧ್ವಂಸಕ ಕೃತ್ಯ ನಡೆದಿದ್ದು. ಇದೀಗ ದೇವಾಲಯದ ಗೋಡೆಯ ಮೇಲೆ ಹಿಂದೂ ವಿರೋಧಿ ಬರಹಗಳು ಕಂಡುಬಂದಿದ್ದು, ಹಿಂದೂಗಳು ಹಿಂದಿರುಗಿ ಎಂದು ಬರೆದಿರುವುದು ಸ್ಥಳೀಯ ಹಿಂದೂ ಸಮುದಾಯದವರ ಆತಂಕಕ್ಕೆ ಕಾರಣವಾಗಿದೆ.
ಇದಕ್ಕೂ ಮೊದಲು, ಸೆಪ್ಟೆಂಬರ್ 17, 2024 ರಂದು ನ್ಯೂಯಾರ್ಕ್ನ BAPS ಸ್ವಾಮಿನಾರಾಯಣ ದೇವಸ್ಥಾನದಲ್ಲಿ ಇದೇ ರೀತಿಯ ವಿಧ್ವಂಸಕ ಘಟನೆ ನಡೆದಿತ್ತು. ಕೆಲವು ದಿನಗಳ ಹಿಂದಷ್ಟೇ ಖಲಿಸ್ತಾನ್ ಉಗ್ರ ಗುರುಪಂತ್ವ ಸಿಂಗ್ ಪನ್ನು ಹಿಂದೂ ದೇವಾಲಯ ಹಾಗೂ ಸಂಸ್ಥೆಗಳಿಗೆ ಇರುವ ಬೆದರಿಕೆಯ ವಿಡಿಯೋಗಳನ್ನು ಹಂಚಿಕೊಂಡಿದ್ದ. ಸದ್ಯ ನ್ಯೂಯಾರ್ಕ್ನಲ್ಲಿ ಸ್ವಾಮಿ ನಾರಾಯಣ ದೇವಾಲಯದ ಮೇಲೆ ನಡೆದ ದಾಳಿಯೂ ಕೂಡ ಕ್ಯಾಲಿಫೋರ್ನಿಯಾ ಹಾಗೂ ಕೆನಡಾದಲ್ಲಿ ನಡೆದ ಮಾದರಿಯಲ್ಲಿಯೇ ನಡೆದಿದೆ. ಇದರ ಹಿಂದೆ ಖಲಿಸ್ತಾನಿ ಉಗ್ರರ ಕೈವಾಡವಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Post a comment
Log in to write reviews