
ಕೇವಲ 20ರೂಪಾಯಿಗೆ ಕಿಡಿಗೇಡಿಗಳು ಚಾಕು ಇರಿದಿರುವ ಘಟನೆ ನಗರದ ವಿದ್ಯಾರಣ್ಯಪುರದ ಬಾರ್ನಲ್ಲಿ ಘಟನೆ ನಡೆದಿದೆ. ಬಾರ್ ಕ್ಯಾಷಿಯರ್ಗೆ ಚಾಕು ಇರಿದ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗು ಕಾರ್ತಿಕ್ ಬಂಧಿತ ಆರೋಪಿಗಳು. ಮತ್ತೋರ್ವ ಆರೋಪಿಗಾಗಿ ಬಲೆ ಬೀಸಿದ್ದಾರೆ.
ವಿದ್ಯಾರಣ್ಯಪುರ ನರಸೀಪುರದ ಜಯಶ್ರೀ ಬಾರ್ನಲ್ಲಿ ಕುಡಿಯಲು ಬಂದಿದ್ದ ಚೇತನ್, ಕಾರ್ತಿಕ್ ಹಾಗೂ ಮತ್ತೋರ್ವ ವ್ಯಕ್ತಿ ಸೇರಿ ಮೂವರು ಜಗಳ ಮಾಡಿಕೊಂಡಿದ್ದಾರೆ. ಬಾರ್ ಕ್ಯಾಷಿಯರ್ 20 ರೂಪಾಯಿ ಹೆಚ್ಚಿಗೆ ಬಿಲ್ ಹಾಕಿದ ಎಂಬ ಕಾರಣಕ್ಕೆ ಚಾಕು, ಬಾಟಲ್ನಿಂದ ಕ್ಯಾಷಿಯರ್ ರಂಜಿತ್ ಎಂಬಾತನ ಮೇಲೆ ಮೂವರು ಕಿಡಿಗೇಡಿಗಳು ಚಾಕುವಿಂದ ಹಲ್ಲೆ ನಡೆಸಿದ್ದಾರೆ. ಈ ಕುರಿತು ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಕೊಲೆಗೆ ಯತ್ನಿಸಿದ ಆರೋಪಿಗಳನ್ನು ಬಂಧಿಸಲಾಗಿದೆ.
Poll (Public Option)

Post a comment
Log in to write reviews