ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಪಿ ಅವರ ಆತ್ಮಹತ್ಯೆ ಪ್ರಕರಣ ಸಂಬಂಧ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಹಣ ದುರ್ಬಳಕೆ ಮಾಡಿಕೊಂಡ ಯೂನಿಯನ್ ಬ್ಯಾಂಕ್ ನ ಆರು ಜನ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಬೇಸತ್ತು ಚಂದ್ರಶೇಖರ್ ಪಿ ಶಿವಮೊಗ್ಗದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನನ್ನ ಸಾವಿಗೆ ನಿಗಮದ ವ್ಯವಸ್ಥಾಪಕ ಪದ್ಮನಾಬ್, ಲೆಕ್ಕಾಧಿಕಾರಿ ಪರಶುರಾಮ್ ದುಗ್ರಣ್ಣನವರೇ ಕಾರಣ ಎಂದು ಡೆತ್ ನೋಟ್ ನಲ್ಲಿ ಆರೋಪಿಸಿದ್ದರು.
ಪ್ರಕರಣ ಸಂಬಂಧ ನಿಗಮದ ಪದ್ಮನಾಬ್ ಮತ್ತು ಪರಶುರಾಮ್ ಇಬ್ಬರನ್ನೂ ಸರ್ಕಾರ ಅಮಾನತುಗೊಳಿಸಿದೆ. ಇದರ ಬೆನ್ನಲ್ಲೇ, ಬುಧವಾರ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಅವರು ಬೆಂಗಳೂರಿನ ಹೈಗೌಂಡ್ ಪೊಲೀಸ್ ಠಾಣೆಯಲ್ಲಿ ಯೂನಿಯನ್ ಬ್ಯಾಂಕ್ 6 ಅಧಿಕಾರಿಗಳ ವಿರುದ್ಧ ನಿರ್ಲಕ್ಷ ಮತ್ತು ಹಣದ ದುರುಪಯೋಗ ವಿರುದ್ಧ ದೂರು ದಾಖಲಿಸಿದ್ದಾರೆ.
ಯೂನಿಯನ್ ಬ್ಯಾಂಕ್ ವಸಂತ ನಗರ ಶಾಖೆಯ ಬ್ಯಾಂಕ್ ಖಾತೆ ನಂಬರ್ ಇದ್ದರೂ ಎಂಜಿ ರಸ್ತೆಯ ಬ್ಯಾಂಕ್ ಶಾಖೆಯಲ್ಲಿ ನಿಗಮದ ಖಾತೆ ಒಪನ್ ಮಾಡಿ 187.33 ಕೋಟಿ ಹಣ ವರ್ಗಾವಣೆಯಾಗಿದೆ. ನಿಗಮದ ವ್ಯವಸ್ಥಾಪಕರ ಮತ್ತು ಲೆಕ್ಕಾಧಿಕಾರಿಗಳ ಸಹಿಯನ್ನ ಬ್ಯಾಂಕ್ ಪಡೆದುಕೊಂಡು ಹೋಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಿಗಮದ ಪಾಸ್ ಬುಕ್, ಚೆಕ್ ಬುಕ್ ಕೇಳಿದಾಗ ನಿಗಮಕ್ಕೆ ಕಳುಹಿಸಿರುವುದಾಗಿ ಹೇಳಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಖಾತೆಯಲ್ಲಿ ಆರ್ ಟಿ ಜಿಎಸ್, ಬೋರ್ಡ್ ರೆಸ್ಟೂಲೇಷನ್ ಜೊತೆಗೆ ಕಾನೂನು ಬಾಹಿರವಾಗಿ 94,73,08,500 ರೂ. ಹಣ ವರ್ಗಾವಣೆಯಾಗಿರುವುದಾಗಿ ರಾಜಶೇಖರ್ ದೂರಿನಲ್ಲಿ ತಿಳಿಸಿದ್ದಾರೆ.
ಸಿಸಿ ಟಿವಿ ದೃಶ್ಯಾವಳಿ ಕೇಳಿದರೂ ಬ್ಯಾಂಕ್ ಅಧಿಕಾರಿಗಳು ಕೇಳಿದರೂ ನೀಡಲಿಲ್ಲ. ಅಲ್ಲದೆ ಠೇವಣಿಯ ಹಣವನ್ನು ಮರುಕಳಿಸುವಂತೆ ಸಹ ವ್ಯವಸ್ಥಾಪಕರಿಗೆ ಪತ್ರ ಬರೆದರೂ ಯಾವುದೇ ಉತ್ತರ ಬಂದಿಲ್ಲ ಹಣ ದುರುಪಯೋಗ ಮಾಡಿಕೊಂಡ ಬ್ಯಾಂಕ್ ನ ಸಿಇಒ ಮನಿಮಾಖಲೈ, ಕಾರ್ಯ ನಿರ್ವಾಹಕ ನಿರ್ದೇಶಕ ನಿತೇಶ್ ರಂಜನ್, ರಾಮಸುಬ್ರಹ್ಮಣ್ಯಂ ಸಂಜಯ್ ರುದ್ರ ಪಂಕಜ್ ದ್ವಿವೇದಿ ಚೀಫ್ ಮ್ಯಾನೇಜರ್ ಶುಚಿಸ್ಮಿತ ರೌಲ್ ಜವಾಬ್ದಾರಿ ಸ್ಥಾನದಲಿದ್ದು ಓವರ್ ಡ್ರಾಫ್ಟ್ ಸೃಷ್ಟಿಸಿ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ನಿಗಮಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವುದಾಗಿ ಎಫ್ ಐಆರ್ ನಲ್ಲಿ ಉಲೇಖಿಸಲಾಗಿದೆ.
Post a comment
Log in to write reviews