
ಬೆಂಗಳೂರು :ರೇಣುಕ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ವಿರುದ್ಧದ ಚಾರ್ಜ್ ಶೀಟ್‌ಗೆ ಸಂಬಧಿಸಿದ 38 ಮಾಧ್ಯಮಗಳ ವಿರುದ್ಧ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ದರ್ಶನ್ ಅವರ ಅರ್ಜಿಯಲ್ಲಿ ಮಧ್ಯಂತರ ಆದೇಶಕ್ಕೆ ಪ್ರಾಥಮಿಕ ಪ್ರಕರಣವನ್ನು ಪ್ರದರ್ಶಿಸಿದ ನಂತರ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಆದೇಶ ಹೊರಡಿಸಿದ್ದಾರೆ
ದರ್ಶನ್ ಪರ ಮಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ಕೆ ನಾವಡಗಿ, ಆಗಸ್ಟ್ 27 ರಂದು ಸಿವಿಲ್ ನ್ಯಾಯಾಲಯವು ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು, ಅದೇ ರೀತಿ ಮಾಧ್ಯಮಗಳು ಗೌಪ್ಯ ವಿವರಗಳನ್ನು ಪ್ರಕಟಿಸುವುದನ್ನ ನಿರ್ಬಂಧಿಸಿದ್ದರೂ, ಮಾಧ್ಯಮಗಳು ಅಂತಹ ಮಾಹಿತಿಯನ್ನು ಪ್ರಸಾರ ಮಾಡುವುದನ್ನು ಮುಂದುವರಿಸಿದೆ ಎಂದು ವಾದ ಮಾಡಿದ್ದಾರೆ.
ಮಾಧ್ಯಮಗಳ ಪ್ರಸಾರದಿಂದ ದರ್ಶನ್ ಅವರ ಪ್ರತಿಷ್ಠೆಗೆ ಧಕ್ಕೆಯಾಗುವುದಲ್ಲದೆ ನಡೆಯುತ್ತಿರುವ ತನಿಖೆಗೆ ಅಡ್ಡಿಯಾಗುತ್ತಿದೆ ಎಂದು ದರ್ಶನ್ ಅವರ ಕಾನೂನು ತಂಡ ಪ್ರತಿಪಾದಿಸಿದೆ.
Poll (Public Option)

Post a comment
Log in to write reviews