
ಹೈದರಾಬಾದ್: ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋ ಜಿ. ರಾವ್ (87) ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಮುಂಜಾನೆ ನಿಧನರಾಗಿದ್ದಾರೆ.
ಅನಾರೋಗ್ಯದ ಹಿನ್ನಲೆ ಇತ್ತೀಚೆಗಷ್ಟೇ ರಾಮೋಜಿ ರಾವ್ ಅವರನ್ನು ಹೈದರಾಬಾದ್ ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಇಂದು ನಿಧನರಾಗಿದ್ದಾರೆ.
ಮಾಧ್ಯಮ ಲೋಕದ ದಿಗ್ಗಜ ಎಂದು ಕರೆಸಿಕೊಳ್ಳುವ ರಾಮೋಜಿ ರಾವ್ ಒಡೆತನದಲ್ಲಿ ಈನಾಡು, ಈಟಿವಿ, ಈಟಿವಿ ಭಾರತ್, ಮಾರ್ಗದರ್ಶಿ ಚಿಟ್ ಫಂಡ್ ಮುಂತಾದ ಸಂಸ್ಥೆ ಗಳಿವೆ. ಚಿತ್ರರಂಗದ ಗಣ್ಯರೂ ರಾಜಕಾರಣಿಗಳು, ಗಣ್ಯರು ಇಂದು ರಾಮೋಜಿ ರಾವ್ ಅವರ ಅಂತಿಮ ದರ್ಶನ ಪಡೆಯಲಿದ್ದಾರೆ.
Poll (Public Option)

Post a comment
Log in to write reviews