
ಮಂಗಳೂರು: ಶೋಷಣೆ ಎಲ್ಲ ರಂಗದಲ್ಲೂ ಇದೆ. ಸಿನಿಮಾಗೆ ಮಾತ್ರ ಸಮಿತಿ ರಚಿಸುವುದರಲ್ಲಿ ಅರ್ಥವಿಲ್ಲ. ಪ್ರತಿಯೊಂದಕ್ಕೂ ಸಮಿತಿ ಮಾಡಿದ್ದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಖ್ಯಾತ ಹಿನ್ನೆಲೆ ಗಾಯಕ ಹಾಗೂ ಸಂಗೀತ ನಿರ್ದೇಶಕ ಡಾ.ಗುರುಕಿರಣ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ದೌರ್ಜನ್ಯ ನಡೆಯದ ಕ್ಷೇತ್ರ ಯಾವುದಿದೆ..? ಉಳಿದ ಕ್ಷೇತ್ರಗಳಲ್ಲಿ ಯಾವ ಕ್ರಮ ಕೈಗೊಂಡಿದ್ದಾರೆ..? ಸಿನಿಮಾ ರಂಗ ಮೊದಲೇ ಸಂಕಷ್ಟದಲ್ಲಿದೆ. ದರ್ಶನ್ ಬಂಧನವಾಗಿರುವುದು ವೈಯಕ್ತಿಕ ವಿಷಯಕ್ಕೆ. ಅದಕ್ಕೂ ಸಿನಿಮಾ ರಂಗಕ್ಕೂ ಯಾವುದೇ ಸಂಬಂಧವಿಲ್ಲ. ದರ್ಶನ್ ಸಿನಿಮಾ ನಟ ಎಂದು ಆ ರೀತಿ ಮಾಡಿದ್ದಲ್ಲ. ವೈಯಕ್ತಿಕ ವಿಚಾರಕ್ಕೆ ಅವರು ಆ ರೀತಿ ಮಾಡಿದ್ದಾರೆ. ಮೇರುನಟ ರಾಜ್‌ಕುಮಾರ್ ಒಂದು ಸಿದ್ಧಾಂತ ಹೊಂದಿದ್ದರು. ಆ ಕಾರಣದಿಂದಲೇ ಅವರಿಗೆ ಜನ ಇಂದಿಗೂ ಗೌರವ ನೀಡುತ್ತಾರೆ. ಎಲ್ಲರೂ ರಾಜ್‌ಕುಮಾರ್ ಆಗಲು ಅಸಾಧ್ಯ ಎಂದರು.
ದರ್ಶನ್ ಬಗ್ಗೆ ಪ್ರತಿಕ್ರಿಯಿಸಿದ ಅವರು,ಆ ಸಂದರ್ಭದಲ್ಲಿ ಏನು ನಡೆದಿದೆ ಎಂದು ಗೊತ್ತಿಲ್ಲ. ಕಾನೂನು, ತನಿಖೆ ಮೂಲಕ ಸತ್ಯ ಹೊರ ಬರಲಿದೆ. ಪೊಲೀಸರು ಸೆಲೆಬ್ರಿಟಿ ಎಂದು ನೋಡದೆ ಉತ್ತಮ ಕೆಲಸ ಮಾಡಿದ್ದಾರೆ. ದರ್ಶನ್ ಬಿಡುಗಡೆಯಾದಲ್ಲಿ ನಮಗೂ ಖುಷಿ ಎಂದರು.
Poll (Public Option)

Post a comment
Log in to write reviews