
2024ರ ಮೇ ತಿಂಗಳಲ್ಲಿ 11 ದಿನಗಳವರೆಗೆ ಬ್ಯಾಂಕ್ ಗಳಿಗೆ ರಜೆ ಇರುತ್ತವೆ. ಆದ್ದರಿಂದ, ಬ್ಯಾಂಕ್ ಗ್ರಾಹಕರು ತಮ್ಮ ಹಣಕಾಸಿನ ವಹಿವಾಟಿನ ವೇಳಾಪಟ್ಟಿ ಬಗ್ಗೆ ಈಗಿನಿಂದಲೇ ಉತ್ತಮವಾಗಿ ಯೋಜಿಸುವುದು ಉತ್ತಮ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ.
ತಿಂಗಳಲ್ಲಿ 11 ದಿನಗಳವರೆಗೆ ಬ್ಯಾಂಕ್‌ಗಳು ಮುಚ್ಚಿದ್ದರೂ, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಮುಂದುವರಿಯುತ್ತವೆ. ಅಲ್ಲದೇ, ಯುಪಿಐ ಮತ್ತು ಎಟಿಎಂ ಸೇವೆಗಳು ಸಹ ಎಂದಿನಂತೆ ನಡೆಯಲಿವೆ. ಆದ್ದರಿಂದ ನೀವು ಬ್ಯಾಂಕ್‌ಗಳಿಗೆ ಹೋಗದೆಯೇ ನಿಮ್ಮ ಹಣಕಾಸಿನ ವಹಿವಾಟುಗಳನ್ನು ಸುಲಭವಾಗಿ ನಿರ್ವಹಿಸಬಹುದು.
ಮೇ ತಿಂಗಳಲ್ಲಿ ಯಾವ್ಯಾವ ದಿನ ಬ್ಯಾಂಕ್ ರಜೆ ಇದೆ ಎಂದು ನೋಡುವುದಾದರೆ
ಮೇ 1 (ಬುಧವಾರ): ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆ.
ಮೇ 5 (ಭಾನುವಾರ) :
ಮೇ 8 (ಬುಧವಾರ) : ರವೀಂದ್ರನಾಥ ಟ್ಯಾಗೋರ್ ಜಯಂತಿ
ಮೇ 10 (ಶುಕ್ರವಾರ) : ಅಕ್ಷಯ ತೃತೀಯ
ಮೇ 11 (ಶನಿವಾರ) : ಎರಡನೇ ಶನಿವಾರ.
ಮೇ 12 (ಭಾನುವಾರ) : ಸಾರ್ವತ್ರಿಕ ರಜೆ.
ಮೇ 16 (ಗುರುವಾರ) : ಸಿಕ್ಕಿಂ ರಾಜ್ಯ ರಚನೆ ದಿನ. ಅದಕ್ಕಾಗಿಯೇ ಸಿಕ್ಕಿಂನ ಬ್ಯಾಂಕ್‌ಗಳಿಗೆ ಅಂದು ರಜೆ ಇರುತ್ತದೆ.
ಮೇ 19 (ಭಾನುವಾರ) : ಬ್ಯಾಂಕ್ ಸಾರ್ವತ್ರಿಕ ರಜೆ
ಮೇ 23 (ಗುರುವಾರ): ಬುದ್ಧ ಪೂರ್ಣಿಮಾ ಇದ್ದು, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ಅಂದು ರಜೆ ಇರುತ್ತದೆ.
ಮೇ 25 (ಶನಿವಾರ) : ನಜ್ರುಲ್ ಜಯಂತಿ, ನಾಲ್ಕನೇ ಶನಿವಾರ ಇದೆ. ಹೀಗಾಗಿ ಬ್ಯಾಂಕ್‌ಗಳಿಗೆ ಸಾರ್ವತ್ರಿಕ ರಜೆ ಇದೆ.
ಮೇ 26 (ಭಾನುವಾರ): ಭಾನುವಾರ ಸಾಮಾನ್ಯ ಬ್ಯಾಂಕ್ ರಜೆ.
Tags:
Poll (Public Option)

Post a comment
Log in to write reviews