
ನಟ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದು, ಇತ್ತೀಚೆಗೆ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿತ್ತು. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಅಭಿಮಾನಿಗಳಂತೂ ಕಿಚ್ಚನ ಆರ್ಭಟ ನೋಡೋಕೆ ಕಾತುರದಿಂದ ಕಾಯುತ್ತಿದ್ದಾರೆ.
ಬಹಳ ದಿನಗಳಿಂದ ಅಭಿಮಾನಿಗಳು 'ಮ್ಯಾಕ್ಸ್' ಅಪ್‌ಡೇಟ್ ಕೇಳ್ತಾ ಬರ್ತಿದ್ದಾರೆ. ಆದರೆ ಎಲ್ಲದಕ್ಕೂ ಸಮಯ ಬರುತ್ತದೆ ಎಂದು ಸುದೀಪ್ ಹೇಳುತ್ತಾ ಬಂದಿದ್ದರು. ಸದ್ಯ ಚಿತ್ರೀಕರಣ ಮುಗಿದಿದ್ದು ಇನ್ನು ಮುಂದೆ ಭಾರೀ ಕುತೂಹಲ ಸಿಗಲಿವೆ. ಸದ್ಯ ಒಂದೇ ಒಂದು ಫೋಟೊ ಲೀಕ್ ಆಗಿ ಸೋಶಿಯಲ್ ಮೀಡಿಯಾನಾ ಶೇಕ್ ಮಾಡುತ್ತಿದೆ. ಅದರಲ್ಲಿ ಕಿಚ್ಚನ ಲುಕ್ ರಿವೀಲ್ ಆಗಿಲ್ಲ. ಆದರೂ ಸಖತ್ ಇಂಟ್ರೆಸ್ಟಿಂಗ್ ಆಗಿದೆ.
ಆಕ್ಷನ್ ಸೀನ್ ಗ್ಲಿಂಪ್ಸ್. ಜಾತ್ರೆಯ ಸೆಟಪ್ ದೊಡ್ಡ ಕಾಳೀಮಾತೆಯ ವಿಗ್ರಹ.. ಅರ್ಜುನ್ ಮಹಾಕ್ಷಯ್(ಸುದೀಪ್) ಕಾಳಿ ವಿಗ್ರಹ ಮುಂದೆ ನಡೆದು ಬರುತ್ತಿರುವುದನ್ನು ನೋಡಬಹುದು. ಪಕ್ಕಾ ಲೋಕಲ್ ಮಾಸ್ ಅವತಾರದಲ್ಲಿ ಕಿಚ್ಚನನ್ನು ನೋಡಿ ಅಭಿಮಾನಿಗಳಂತೂ ಥ್ರಿಲ್ ಆಗಿದ್ದಾರೆ. ಕ್ಲೈಮ್ಯಾಕ್ಸ್ ಅಥವಾ ಇಂಟ್ರವಲ್ ವೇಳೆಗೆ ಬರುವ ಆಕ್ಷನ್ ಸನ್ನಿವೇಶ ಎಂದು ಅಭಿಮಾನಿಗಳು ನಿರೀಕ್ಷೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಸಿನಿಮಾ ರಿಲೀಸ್ ಆಗಿ ಕಿಚ್ಚನ ಭಕ್ತ ಗಣ ಕಾತುರದಿಂದ ಕಾಯುತ್ತಿದೆ.
Poll (Public Option)

Post a comment
Log in to write reviews