ಬೆಂಗಳೂರು: 2013ರ ನವೆಂಬರ್ 5 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್ಎಲ್ವಿ ರಾಕೆಟ್ ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. 2014 ರ ಸೆಪ್ಟೆಂಬರ್ 24 ರಂದು ಅದು ಮಂಗಳನ ಕಕ್ಷೆ ಸೇರಿತ್ತು. ಈ ಮಹತ್ವದ ಗ್ರಹ ಕಕ್ಷೆ ಸೇರಿ 10 ವರ್ಷ ಕಳೆದಿದ್ದು, ಈ ಸುದಿನವನ್ನ ವಿಜ್ಞಾನಿಗಳು ಸಂಭ್ರಮಿಸುತ್ತಿದ್ದಾರೆ.
ಮೊದಲು ಈ ಉಪಗ್ರಹವನ್ನು 6 ತಿಂಗಳ ಅವಧಿಗೆ ಕಾರ್ಯಾಚರಣೆ ನಡೆಸುವ ಗುರಿ ಹೊಂದಲಾಗಿತ್ತು. ಬಳಿಕ ಅದು 8 ವರ್ಷಗಳ ಕಾಲ ಮಂಗಳನ ಕಕ್ಷೆ ಸುತ್ತಿ ಹಲವು ಸಂಶೋಧನೆ ನಡೆಸಿದೆ.
ಜೊತೆಗೆ ಮಂಗಳ ಗ್ರಹದ ವಾತಾವರಣ, ಅದರ ಮೇಲ್ಮೈ ಲಕ್ಷಣ, ಅಲ್ಲಿರಬಹುದಾದ ಸೂಕ್ಷ್ಮ ಜೀವಕಣಗಳ ಅಧ್ಯಯನ ಸೇರಿದಂತೆ ಮತ್ತಿತರ ಮಹತ್ತರ ಮಾಹಿತಿಯನ್ನು ಕಲೆ ಹಾಕಿದೆ. ಜಗತ್ತೇ ಭಾರತದತ್ತ ತಿರುಗಿ ನೋಡಿದ ಕ್ಷಣಕ್ಕೆ 10 ವರ್ಷ ತುಂಬಿದೆ. ಮೊದಲ ಪ್ರಯತ್ನದಲ್ಲೇ ಮಂಗಳಯಾನ ಯಶಸ್ವಿಗೊಳಿಸಿದ್ದ ಭಾರತದ ಹಿರಿಮೆಯನ್ನ ಮಕ್ಕಳಿಗೆ ತಿಳಿಸುವ ಸಲುವಾಗಿ ನೆಹರು ತಾರಾಲಯದಲ್ಲಿ ನಿನ್ನೆ ವಿಶೇಷ ಮಾಡೆಲ್ ಪ್ರದರ್ಶನ ಏರ್ಪಡಿಸಲಾಗಿತ್ತು.
Post a comment
Log in to write reviews