
ಮುಂಬೈ: T20 ವಿಶ್ವಕಪ್ ಗೆದ್ದ ಭಾರತದ ಆಟಗಾರರನ್ನು ಸ್ವಾಗತಿಸಲು ವಿಜಯೋತ್ಸವದ ಮೆರವಣಿಗೆಯನ್ನು ಮುಂಬೈನ ಮರೈನ್ ಡ್ರೈವ್‌ನಲ್ಲಿ ಆಯೋಜಿಸಲಾಗಿದ್ದು ಈ ವೇಳೆ ನೂಕು ನುಗ್ಗಲಾಗಿ ಹಲವು ಮಂದಿಗೆ ಗಾಯಗಳಾಗಿವೆ.
ರೋಹಿತ್ ಶರ್ಮಾ ನೇತೃತ್ವದ ತಂಡ ಮರೈನ್ ಡ್ರೈವ್ನಿಂದ ಬಸ್ ಪರೇಡ್‌ಗೆ ಚಾಲನೆ ನೀಡಿತು. ಭಾರತ ತಂಡದ ಆಟಗಾರರನ್ನು ಸ್ವಾಗತಿಸಲು ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ಜಮಾಯಿಸಿದ್ದರು. ತೆರೆದ ಬಸ್ಸಿನಲ್ಲಿ ಆಟಗಾರರು ಈ ಪ್ರಯಾಣವನ್ನು ಸಂಪೂರ್ಣವಾಗಿ ಆನಂದಿಸಿದರು. ಈ ವಿಜಯೋತ್ಸವದ ಮೆರವಣಿಗೆಯೂ ಕೆಲ ಅಭಿಮಾನಿಗಳಿಗೆ ಸಮಸ್ಯೆಯಾಯಿತು. ಜನಸಂದಣಿಯಿಂದಾಗಿ ಕೆಲವು ಕ್ರಿಕೆಟ್ ಅಭಿಮಾನಿಗಳು ಗಾಯಗೊಂಡರು ಮತ್ತು ಕೆಲವರು ಉಸಿರಾಟದ ತೊಂದರೆ ಅನುಭವಿಸಿದರು ಎನ್ನಲಾಗಿದೆ.
Poll (Public Option)

Post a comment
Log in to write reviews