2024-12-24 05:57:20

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ನೀರಜ್‌ ಚೋಪ್ರಾ-ಮನು ಭಾಕರ್‌ ಮದುವೆ ವದಂತಿ ಬಗ್ಗೆ ಸ್ಪಷ್ಟನೆ ಕೊಟ್ಟ ಮನು ಭಾಕರ್‌ ತಂದೆ

ನವದೆಹಲಿ: ಪ್ಯಾರಿಸ್ ಒಲಿಂಪಿಕ್‌(Paris Paralympic 2024) ಬೆಳ್ಳಿ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Manu Bhaker-Neeraj Chopra) ಹಾಗೂ ಶೂಟಿಂಗ್​ನಲ್ಲಿ ಅವಳಿ ಕಂಚಿನ ಪದಕ ಗೆದ್ದ ಮನು ಭಾಕರ್ ಮಧ್ಯೆ ಪ್ರೇಮಾಂಕುರವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿತ್ತು. ಇವರಿಬ್ಬರು ಆತ್ಮೀಯವಾಗಿ ಮಾತನಾಡುತ್ತಿರುವ ವಿಡಿಯೊ ಭಾರೀ ಚರ್ಚೆಗೆ ಗ್ರಾಸವಾಗಿತ್ತು,. ಅಲ್ಲದೆ ಮನು(Manu Bhaker) ತಾಯಿ ಕೂಡ ನೀರಜ್​ ಜತೆ ಕಾಣಿಸಿಕೊಂಡಿದ್ದ ಕಾರಣ ನೀರಜ್​-ಮನು ಮಧ್ಯೆ ಪ್ರೀತಿ ಇರುವುದು ಖಚಿತ ಎನ್ನಲಾಗಿತ್ತು. ಇದೇ ವಿಚಾರವಾಗಿ ಇದೀಗ ಮನು ಭಾಕರ್​ ತಂದೆ(Manu Bhaker Father) ರಾಮ್ ಕಿಶನ್(Ram Kishan) ಸ್ಪಷ್ಟನೆ ನೀಡಿದ್ದಾರೆ.

ಮಗಳ(ಮನು ಭಾಕರ್​) ಮದುವೆ ವಿಚಾರವಾಗಿ ಹರಿದಾಡುತ್ತಿರುವ ವದಂತಿಗಳಿಗೆ ಪ್ರತಿಕ್ರಿಯೆ ನೀಡಿರುವ ತಂದೆ ರಾಮ್ ಕಿಶನ್, “ನನ್ನ ಮಗಳು ಇನ್ನೂ ಚಿಕ್ಕ ವಯಸ್ಸಿನವಳು. ಈಗ ವಿವಾಹವಾಗುವ ವಯಸ್ಸು ಕೂಡ ಅವಳದ್ದಲ್ಲ. ಸದ್ಯ ಮದುವೆ ಬಗ್ಗೆ ಯಾವ ಯೋಚನೆಯೂ ಇಲ್ಲ. ಮನು ತಾಯಿ ನೀರಜ್​ರನ್ನು ತನ್ನ ಸ್ವಂತ ಮಗನಂತೆ ಕಾಣುತ್ತಾರೆ. ಹೀಗಾಗಿ ನೀರಜ್​ ಜತೆ ತುಂಬಾ ಆತ್ಮೀಯವಾಗಿ ಕಾಣಿಸಿಕೊಂಡರು” ಎಂದು ಹೇಳುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಮನು ಭಾಕರ್​ ಅವರ ತಾಯಿ ನೀರಜ್(Neeraj Chopra)​ ಜತೆ ಮಾತನಾಡುತ್ತಾ ನೀರಜ್​ ಅವರ ಕೈಯನ್ನು ತನ್ನ ತಲೆ ಮೇಲೆ ಇರಿಸಿ ಏನೋ ಪ್ರಮಾಣ ಮಾಡುತ್ತಿರುವಂತೆ ವಿಡಿಯೊದಲ್ಲಿ ಕಂಡುಬಂದಿತ್ತು. ನೀರಜ್​ ಮತ್ತು ಮನು ಮಾತುಕತೆ ನಡೆಸುತ್ತಿದ್ದ ವೇಳೆ ಅಲ್ಲಿದ್ದ ಅನೇಕ ಅಥ್ಲೀಟ್​ಗಳು ಇವರಿಬ್ಬರನ್ನು ಬೆರಗು ಕಣ್ಣಿನಿಂತ ನೋಡುತ್ತಾ ನಿಂತಿದ್ದರು. ಈ ವಿಡಿಯೊಗಳು ಭಾರೀ ವೈರಲ್​ ಆದ ಕಾರಣ ಈ ಜೋಡಿ ಮುಂದೊಂದು ದಿನ ವಿವಾಹವಾಗುವುದು ಖಚಿತ ಎಂದು ನೆಟ್ಟಿಗರು ಹೇಳಲಾರಂಭಿಸಿದ್ದರು.

Post a comment

No Reviews