
ಉಡುಪಿ: ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಯುವಕನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇರಳ ಮೂಲದ ವಿದ್ಯಾರ್ಥಿ ಸಿದ್ದಾರ್ಥ ಬಂಧಿತ ಆರೋಪಿ.
ಮಣಿಪಾಲದಲ್ಲಿ ಈತ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಇತರ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಮಣಿಪಾಲ ಹೆರ್ಗದ ಅಪಾರ್ಟ್ಮೆಂಟ್ ಒಂದರಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ವಿಧ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ ರೂ. 20,000 ಮೌಲ್ಯದ 388 ಗ್ರಾಂ ಗಾಂಜಾ 45,000 ಮೌಲ್ಯದ ಮೊಬೈಲ್ ವಶಕ್ಕೆ ಪಡೆದಿದ್ದಾರೆ.
ವಿಧ್ಯಾರ್ಥಿಯ ಬಳಿ ಗಾಂಜಾ ತುಂಬಿಸಿಟ್ಟಿದ್ದ ಸಿಗರೇಟ್ ಮಾದರಿಯ 43 ರೋಲ್ ಗಳು ಪತ್ತೆಯಾಗಿದ್ದು, ತಮಿಳುನಾಡಿನಿಂದ ಗಾಂಜಾ ಖರೀದಿಸಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಯುವಕ ಒಂದು ರೋಲ್ ನಿಂದ ಒಂದು ಸಾವಿರ ರೂಪಾಯಿ ಹಣ ಗಳಿಸುತ್ತಿದ್ದ ಎಂದು ಮಾಹಿತಿ ಪೊಲೀಸರಿಂದ ತಿಳಿದು ಬಂದಿದೆ.
Poll (Public Option)

Post a comment
Log in to write reviews