ಭುಜ ತಾಗಿದ್ದಕ್ಕೆ ವ್ಯಕ್ತಿಗೆ ಚಾಕು ಇರಿತ, ಇಬ್ಬರ ಬಂಧನ : ಚಿಕ್ಕಬಳ್ಳಾಪುರ

ಭುಜ ತಗುಲಿಸಿದ ಎಂದು ಕಿರಿಕ್ ತೆಗೆದ ಯುವಕರು ವ್ಯಕ್ತಿಯೊಬ್ಬರ ಮೇಲೆ ಚಾಕುವಿನಿಂದ ಮನಸ್ಸೋ ಇಚ್ಛೆ ಇರಿದಿರುವ ಘಟನೆ ಗೌರಿಬಿದನೂರು ನಗರದ ಸೆವೆನ್ ಹಿಲ್ಸ್ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ನಡೆದಿದೆ.
ಗೌರಿಬಿದನೂರು ನಗರದ ನಿವಾಸಿ ರಮೇಶ್ ಎಂಬಾತ ಕಳೆದ ರಾತ್ರಿ ಬಾರ್ವೊಂದರಲ್ಲಿ ಮದ್ಯ ಸೇವಿಸಲು ತೆರಳಿದ್ದಾಗ ಅಲ್ಲೇ ಇದ್ದ ಪವನ್ ಹಾಗೂ ಮಣಿಕಂಠ ಎಂಬ ಯುವಕರು ಅಡ್ಡ ಬಂದಿದ್ದಾರೆ. ಈ ವೇಳೆ, ಆಕಸ್ಮಿಕವಾಗಿ ರಮೇಶ್ ಭುಜ ತಗುಲಿದ ಪರಿಣಾಮ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ರಮೇಶ್ ಪಕ್ಕದ ಸೆವೆನ್ ಹಿಲ್ಸ್ ಬಾರ್ ಅಂಡ್ ರೆಸ್ಟೋರೆಂಟ್ಗೆ ಬಂದಿದ್ದಾರೆ. ಬಳಿಕ ಅಲ್ಲಿಗೂ ಬಂದ ಮಣಿಕಂಠ ಹಾಗೂ ಪವನ್, ರಮೇಶ್ ಮೇಲೆ ಚಾಕುವಿನಿಂದ ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ರಮೇಶ್ನನ್ನು ಗೌರಿಬಿದನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಪ್ರಕರಣ ಸಂಬಂಧ ಗೌರಿಬಿದನೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮಣಿಕಂಠ ಹಾಗೂ ಪವನ್ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Tags:
Poll (Public Option)

Post a comment
Log in to write reviews