
ನಂಜನಗೂಡು: ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಪಟ್ಟಣದ ಶ್ರೀಕಂಠೇಶ್ವರ ದೇವಾಲಯದ ಹದಿನಾರು ಕಾಲು ಮಂಟಪದ ಬಳಿ ನಡೆದಿದೆ.
ಬಂಗಾರು (47) ಮೃತ ದುರ್ದೈವಿ. ಬಂಗಾರು ತರಕಾರಿ ವ್ಯಾಪಾರಿಯಾಗಿದ್ದು, ರಾಜ್ಯದಿಂದ ತಮಿಳುನಾಡಿಗೆ ತರಕಾರಿ ಸಾಗಿಸುತ್ತಿದ್ದ ಎನ್ನಲಾಗಿದ್ದು, ಶುಕ್ರವಾರ ಮದುವೆಗೆಂದು ನಂಜನಗೂಡಿಗೆ ಬಂದಿದ್ದಾಗ, ಅಪರಿಚಿತರು ಪಟ್ಟಣದ ಹದಿನಾರು ಕಾಲು ಮಂಟಪದ ಬಳಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ. ಯಾವ ಕಾರಣಕ್ಕಾಗಿ ಕೊಲೆಗೈಯ್ಯಲಾಗಿದೆ? ಯಾರು ಕೊಲೆ ಮಾಡಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಕೊಲೆಗೈದ ಅಪರಾಧಿಗಳ ಪತ್ತೆಗಾಗಿ ತಂಡವನ್ನು ರಚಿಸಿ ತಲಾಶ್ ನಡೆಸಿದ್ದಾರೆ.
Poll (Public Option)

Post a comment
Log in to write reviews