
ಶಿವಮೊಗ್ಗ: ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ವೇಳೆ ವ್ಯಕ್ತಿಯೋರ್ವ ಹೃದಯಾಘಾತವಾಗಿ ಮೃತಪಟ್ಟ ಘಟನೆ ಶಿವಮೊಗ್ಗದ ನೆಹರು ಸ್ಟೇಡಿಯಂನಲ್ಲಿ ನಡೆದಿದೆ. ಸೈಕಲ್ ಕ್ಲಬ್‌ನ ಸದಸ್ಯ ಹಾಗೂ ಬ್ಯಾಡ್ಮಿಂಟನ್ ಪ್ಲೇಯರ್ ಆಗಿರುವ ಮಲ್ಲಿಕಾರ್ಜುನ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಸುರಹೊನ್ನೆ ಗ್ರಾಮದ ಮಲ್ಲಿಕಾರ್ಜುನ್, ಎಂದಿನಂತೆ ಇಂದು ಬೆಳಗ್ಗೆ ನಗರದ ನೆಹರು ಸ್ಟೇಡಿಯಂನಲ್ಲಿ ಬ್ಯಾಡ್ಮಿಂಟನ್ ಆಡಿ ಕುಳಿತುಕೊಂಡಿದ್ದರು. ಈ ವೇಳೆ ಅವರಿಗೆ ಹೃದಯಾಘಾತವಾಗಿದೆ.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪತ್ರಿ ಸೇರಿದಂತೆ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಮಲ್ಲಿಕಾರ್ಜುನ್ ಅವರು ಮೊದಲು ಜಿಲ್ಲಾ ಪಂಚಾಯಿತಿನಲ್ಲಿ ಹಾಗೂ ಸದ್ಯ ಡಯಟ್ ಆಫೀಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಇವರ ನಿಧನಕ್ಕೆ ಶಿವಮೊಗ್ಗ ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಭಾರದ್ವಾಜ್, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರಣೋದಯ ಘಟಕದ ವಾಗೀಶ್ಮ, ರೋಟರಿ ಜಿ. ವಿಜಯಕುಮಾರ್, ನರಸಿಂಹಮೂರ್ತಿ, ಶಟಲ್ ಬ್ಯಾಡ್ಮಿಂಟನ್ ಆಟಗಾರರು ಹಾಗೂ ಸುರಹೊನ್ನೆ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.
Poll (Public Option)

Post a comment
Log in to write reviews