ಮಲಯಾಳಂ ‘ಮನೋರಥಂಗಳ್’ ಚಿತ್ರದ ಟ್ರೇಲರ್ ರಿಲೀಸ್ ಒಂಭತ್ತು ಕಥೆಗಳಿಗೆ 8 ಜನ ನಿರ್ದೇಶಕರು

ಬೆಂಗಳೂರು ; ಮಲಯಾಳಂನ ಚಿತ್ರಕಥೆಗಾರ ಮತ್ತು ನಿರ್ದೇಶಕ ಎಂಟಿ ವಾಸುದೇವನ್ ನಾಯರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮನೋರಥಂಗಳ್ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ.
9 ಕಥೆಗಳಿರುವ ಈ ಸಿನಿಮಾಗೆ 8 ಜನ ನಿರ್ದೇಶಕರು ಆಕ್ಷನ್ ಕಟ್ ಹೇಳಿದ್ದಾರೆ. ಎಂಟಿ ವಾಸುದೇವನ್ ನಾಯರ್ ಕಥೆ ಬರೆದಿದ್ದು ಮಲಯಾಳಂ ಇಂಡಸ್ಟ್ರಿಯ ನಟರ ದಂಡೇ ಈ ಸಿನಿಮಾದಲ್ಲಿದೆ.
ಸದ್ಯ ಬಿಡುಗಡೆ ಆಗಿರುವ ಮನೋರಥಂಗಳ್ ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ವಿಶೇಷ ಏನೆಂದರೆ, ಈ ಚಿತ್ರದ ಟ್ರೇಲರ್ ನಲ್ಲಿ ಕಮಲ್ ಹಾಸನ್ ಸಹ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿಯೂ ಅವರದ್ದು ವಿಶೇಷ ಪಾತ್ರವಿದೆ.
ಮನೋರಥಂಗಳ್ ಚಿತ್ರದಲ್ಲಿ ಕಮಲ್ ಹಾಸನ್, ಮೋಹನ್ ಲಾಲ್, ಮಮ್ಮುಟ್ಟಿ, ಫಹಾದ್ ಫಾಸಿಲ್, ಪಾರ್ವತಿ ತಿರುವೋತ್ತು, ಹರೀಶ್ ಉತ್ತಮನ್, ಬಿಜು ಮೆನನ್, ಶಾಂತಿ ಕೃಷ್ಣ, ಜಾಯ್ ಮ್ಯಾಥ್ಯೂ, ಮಧು, ಆಸಿಫ್ ಅಲಿ, ನದಿಯಾ ಮೊಯ್ದು, ಕೈಲಾಸ, ಇಂದ್ರನ್ಸ್, ನೆಡುಮುಡಿ ವೇಣು, ರಣಜಿ ಪಣಿಕ್ಕರ್, ಸುರಭಿ ಲಕ್ಷ್ಮಿ, ಸಿದ್ದಿಕ್, ಇಶಿತ್ ಯಾಮಿನಿ, ನಾಸೀರ್, ಇಂದ್ರಜಿತ್, ಅಪರ್ಣಾ ಬಾಲಮುರಳಿ ತಾರಬಳಗದಲ್ಲಿದ್ದಾರೆ.
Poll (Public Option)

Post a comment
Log in to write reviews