
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ, ಸಚಿವ ಕೆ. ವೆಂಕಟೇಶ್ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಆರೋಪಿಸಿದ್ದಾರೆ.
ಕೆ.ವೆಂಕಟೇಶ್ ಅವರು ತಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ಉಳಿದವರೊಂದಿಗೆ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ತಮಗೆ ಆರು ತಿಂಗಳ ಅವಧಿಯಲ್ಲಿ 24 ಬಾರಿ ನೋಟಿಸ್ ನೀಡಿದ್ದಾರೆ. ವಾಸಸ್ಥಳ ದೃಡೀಕರಣ ಪತ್ರ, 65 ಎನ್‌ಕ್ವೈರಿ, 64 ಎನ್‌ಕ್ವೈರಿ ಹೆಸರಿನಲ್ಲಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ನನ್ನನ್ನು ಮೈಮುಲ್ ಅಧ್ಯಕ್ಷ ಸ್ಥಾನದಿಂದ ಇಳಿಸಲು ಕೆ.ವೆಂಕಟೇಶ್ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
2028ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮಗನನ್ನು ರಾಜಕೀಯಕ್ಕೆ ತರಲು, ಅವರಿಗೆ ಟಿಕೆಟ್ ಕೊಡಿಸಲು ನನ್ನನ್ನು ಹಿಂದೆ ಸರಿಯಲು ಪ್ರಯತ್ನಿಸುತ್ತಿದ್ದಾರೆ. ಮೈಮುಲ್‌ನಿಂದ ಹೊರ ಕಳಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿದ್ದು, ಮೈಮುಲ್ ನಿರ್ದೇಶಕರ ಮೇಲೂ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Poll (Public Option)

Post a comment
Log in to write reviews