
ಪ್ರತಿ ವರ್ಷ ಅಕ್ಟೋಬರ್ 2ರಂದು ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ಯವನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತದ ಸ್ವಾತಂತ್ರ್ಯ ಚಳವಳಿಯ ಅಪ್ರತಿಮ ಹೋರಾಟಗಾರ ಮಹಾತ್ಮ ಗಾಂಧಿ ಅವರ ಜನ್ಮದಿನ.
ಗುಜರಾತಿನ ಪೋರಬಂದರಿನಲ್ಲಿ ಹುಟ್ಟಿದ ಒಬ್ಬ ಸಾಮಾನ್ಯ ವ್ಯಕ್ತಿ ಇಡೀ ಜಗತ್ತನ್ನು ಪ್ರಭಾವಿಸಿದ್ದು, ಅದು ಅಲ್ಲದೆ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ 33 ಕೋಟಿ ಭಾರತೀಯರು ಗಾಂಧಿಯವರ ಮಾತುಗಳನ್ನು ಆಲಿಸುತ್ತಿದ್ದರು. ಅಹಿಂಸೆಯ ಮಾರ್ಗದಲ್ಲಿಯೇ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಬೇಕು ಎಂದು ಪಣ ತೊಟ್ಟ ಮೊದಲ ಸ್ವಾತಂತ್ರ್ಯ ಹೋರಾಟಗಾರ ಎಂಬ ಹೆಗ್ಗಳಿಕೆ ಗಾಂಧೀಜಿ ಯವರಿಗೆ ಸೇರಿದೆ. ಇನ್ನು ಗಾಂಧೀಜಿ ಅವರ ಹುಟ್ಟು ಹಬ್ಬವನ್ನು ವಿಶ್ವ ಅಹಿಂಸಾ ದಿನವಾಗಿ ಇಡೀ ರಾಜ್ಯಾದಂತ ಆಚರಿಸಲಾತ್ತದೆ. ಇಂದು ಗಾಂಧಿ ಜಯಂತಿ ಹಿನ್ನಲೆ ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಗಾಂಧಿಜಿಯವರ ಭಾವ ಚಿತ್ರವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ.
ಗಾಂಧೀಜಿ ಈ ದೇಶಕ್ಕೆ ನೀಡಿದ ಕೊಡುಗೆ, ಸಾಹಿತ್ಯ ಕೊಡುಗೆ, ತತ್ವಗಳು, ಬೋಧನೆ, ಸ್ವಾತಂತ್ರ್ಯ ಹೋರಾಟ, ಸಿದ್ಧಾಂತಗಳು ಎಲ್ಲ ರೀತಿಯ ಕೊಡುಗೆಗಳಿಂದ ರಾಷ್ಟ್ರಪಿತನಾಗಿ ಎಲ್ಲರ ಮನದಲ್ಲಿ ಉಳಿದಿದ್ದಾರೆ. ಇಂದು ಅವರ ಜನ್ಮದಿನವನ್ನು ರಾಷ್ಟ್ರೀಯ ಹಬ್ಬವಾಗಿ ಗಾಂಧಿ ಜಯಂತಿ ಎಂದು ಪ್ರತಿವರ್ಷ ಆಚರಣೆ ಮಾಡುತ್ತಿದ್ದೇವೆ
Poll (Public Option)

Post a comment
Log in to write reviews