
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಅಧಿಕಾರವಧಿಯಲ್ಲಿ ಕೆಲ ವಸ್ತುಗಳನ್ನು ತೆಗೆದುಕೊಂಡು ಹೋಗಿರುವ ಆರೋಪ ಸಂಬಂಧ ಅವರ ವೇತನದಲ್ಲಿ ಹಣ ಕಡಿತಗೊಳಿಸುವಂತೆ ಇಲಾಖೆಗೆ ಪತ್ರ ಬರೆಯಲಾಗಿದೆ.
ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ತಮ್ಮ ಅಧಿಕೃತ ನಿವಾಸದ ವಾಸಕ್ಕೂ ಮುನ್ನ ಆಡಳಿತ ತರಬೇತಿ ಸಂಸ್ಥೆಯಲ್ಲಿ ವಾಸ್ತವ್ಯವಿದ್ದರು. ನಂತರ ಜಿಲ್ಲಾಧಿಕಾರಿ ಅಧಿಕೃತ ನಿವಾಸಕ್ಕೆ ತೆರಳಿದ್ದರು. ಅಧಿಕೃತ ನಿವಾಸಕ್ಕೆ ಬದಲಾಗುವ ವೇಳೆ ಆಡಳಿತ ತರಬೇತಿ ಸಂಸ್ಥೆಯ ನಿವಾಸದಲ್ಲಿದ್ದ ವಸ್ತುಗಳನ್ನು ತೆಗೆದುಕೊಂಡು ಹೋದ ಆರೋಪ ಎದುರಿಸುತ್ತಿದ್ದಾರೆ.
ತರಬೇತಿ ಸಂಸ್ಥೆಯಲ್ಲಿದ್ದ ಟವೆಲ್, ಬ್ಲ್ಯಾಕೆಂಟ್, ಹಾಸಿಗೆ, ಮಂಚ, ಸ್ಟೂಲ್ ಸೇರಿ 23 ವಸ್ತುಗಳನ್ನು ತೆಗೆದುಕೊಂಡು ಹೋದ ಆರೋಪವಿದ್ದು, ಇದರ ಒಟ್ಟು ಮೌಲ್ಯ 77,296 ರೂಪಾಯಿಯಾಗಿದೆ. ಈ ವಸ್ತುಗಳನ್ನು ಹಿಂದಿರುಗಿಸುವಂತೆ ಆಡಳಿತ ತರಬೇತಿ ಸಂಸ್ಥೆ ನಿರ್ದೇಶಕರು ಪತ್ರ ಬರೆದಿದ್ದರೂ ಸ್ಪಂದಿಸದ ಆರೋಪವಿದೆ. ಈ ಸಂಬಂಧ ಹಿನ್ನೆಲೆ 77,296 ರೂಪಾಯಿ ಸಂಬಳದಲ್ಲಿ ಕಡಿತಗೊಳಿಸಿ ಆಡಳಿತ ತರಬೇತಿ ಸಂಸ್ಥೆಗೆ ಪಾವತಿಸುವಂತೆ ಸಂಸ್ಥೆಯ ಜಂಟಿ ನಿದೇಶಕರು ಸಿಬ್ಬಂದಿ ಆಡಳಿತ ಸುಧಾರಣೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
Poll (Public Option)

Post a comment
Log in to write reviews