
ಬಿಗ್ ಬಾಸ್ ಸೀಸನ್ 11ರ 14ನೇ ಸ್ಪರ್ಧಿಯಾಗಿ ಚೈತ್ರಾ ಕುಂದಾಪುರ ದೊಡ್ಮನೆ ಒಳಗೆ ಕಾಲಿಟ್ಟಿದ್ದಾರೆ.. ಕೆಲ ತಿಂಗಳ ಹಿಂದೆ ಚೈತ್ರಾ ಕುಂದಾಪುರ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬಂದಿದ್ವು.. ದುಡ್ಡಿಗಾಗಿ ಮೋಸ, ವಂಚನೆ ಮಾಡಿದ್ರು. ಬರೀ ಹಗರಣಗಳನ್ನ ಮಾಡ್ತಿದ್ದಾರೆ ಅಂತ.. ಹೀಗಾಗಿನೆ ಅವ್ರ ಮೇಲೆ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿದ್ವು..
ಆದ್ರೀಗ ಬಿಗ್ ಬಾಸ್ ಮನೆಗೆ ಹೋಗಿ ಇನ್ನು ಒಂದು ವಾರ ಆಗಿಲ್ಲ.. ಆಗ್ಲೇ ದೊಡ್ಮನೆಯಿಂದ ಚೈತ್ರಾರನ್ನ ಹೊರಗೆ ಕಳಿಸಬೇಕು ಅಂತ ವಕೀಲರಾದ ಕೆ ಎಲ್ ಭೋಜರಾಜ್ ಪಟ್ಟು ಹಿಡಿದಿದ್ದಾರೆ..
ಹೌದು ಚೈತ್ರಾ ಕುಂದಾಪುರ ಬಿಗ್ ಬಾಸ್ ಗೆ ಬಂದಿರುವುದು ಒಳ್ಳೆಯದಲ್ಲ. ತಕ್ಷಣ ಕಲರ್ಸ್ ಕನ್ನಡದ ತಂಡ ಚೈತ್ರಾ ಕುಂದಾಪುರ ರವರನ್ನು ಹೊರಕ್ಕೆ ಹಾಕಬೇಕು ಎಂದು ಈಗಾಗಲೇ ನೋಟಿಸ್ ನೀಡಲಾಗಿದೆ, ಇನ್ನು ಎರಡು ಮೂರು ದಿನದಲ್ಲಿ ನಮ್ಮ ನೋಟಿಸ್ ಗೆ ಉತ್ತರ ನೀಡದೆ ಇದ್ದಲ್ಲಿ ಹೈಕೋರ್ಟ್ ಹಾಗೂ ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಬಿಗ್ ಬಾಸ್ ಹನ್ನೊಂದರ ಸೀಸನ್ ಸ್ಥಗಿತ ಮಾಡಲಾಗುತ್ತೆ ಅಂತ ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ ಮಾತಲ್ಲೆ ಪಂಚ್ ಕೊಡ್ತಿದ್ದಾ ಚೈತ್ರಾ ಕುಂದಾಪುರಗೆ ಈಗ ದೊಡ್ಮನೆಯಲ್ಲೂ ನೆಮ್ಮದಿ ಇಲ್ಲದಂತಾಗಿದೆ.. ವಕೀಲರ ಎಚ್ಚರಿಕೆಗೆ ಬಿಗ್ ಬಾಸ್ ಏನ್ ಉತ್ತರ ಕೊಡ್ತಾರೆ ಅನ್ನೋದನ್ನ ಕಾದು ನೋಡ್ಬೇಕು..
Poll (Public Option)

Post a comment
Log in to write reviews