
ಬೆಂಗಳೂರು: ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ಹಾಲ್ ಒಂದರಲ್ಲಿ ಇಂದು ಬೆಳಗ್ಗೆ ವಕೀಲೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದ ಆರೋಪಿಯನ್ನು ಹಲಸೂರು ಗೇಟ್ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜಯರಾಮರೆಡ್ಡಿ ಚಾಕು ಇರಿದ ಆರೋಪಿ. ಎಂದು ತಿಳಿದು ಬಂದಿದೆ. ಹಲ್ಲೆಗೊಳಗಾದ ವಕೀಲೆ ವಿಮಲಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಲಾ ಪರಿಸ್ಥಿತಿ ಗಂಭೀರವಾಗಿದೆ. ವಕೀಲೆ ವಿಮಲಾ ಮತ್ತು ಆರೋಪಿ ಜಯರಾಮ ಸ್ನೇಹಿತರು. ವಕೀಲೆ ವಿಮಲಾ ಜೊತೆ ಕಳೆದ ಖಾಸಗಿ ಕ್ಷಣಗಳನ್ನು ಜಯರಾಮ ವಿಡಿಯೋ ಮಾಡಿಕೊಂಡಿದ್ದಾನೆ. ಅಲ್ಲದೆ ಜಯರಾಮ ಸ್ನೇಹಿತೆ ವಿಮಲಾ ಬಳಿಯಿಂದ ಹಂತಹಂತವಾಗಿ ಒಂದೂವರೆ ಕೋಟಿಗಿಂತಲೂ ಹೆಚ್ಚು ಹಣ ಪಡೆದಿದ್ದಾನೆ. ನಂತರ ಹೆಜ್ಜಾಲ ಬಳಿ ಇರುವ ಜಾಗದ ವಿಚಾರವಾಗಿ ಇಬ್ಬರಲ್ಲಿ ಕಿರಿಕ್ ಆಗಿತ್ತು.
ಬಳಿಕ ವಕೀಲೆ ವಿಮಲಾ ಶೇಷಾದ್ರಿಪುರಂ ಠಾಣೆಯಲ್ಲಿ ಜಯರಾಮ ವಿರುದ್ಧ ದೌರ್ಜನ್ಯ ಮತ್ತು ಜಾಗದ ವಿಚಾರವಾಗಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಸಂಬಂಧ ಇಬ್ಬರೂ ಮಂಗಳಾವಾರ ವಿಚಾರಣೆಗೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಆರೋಪಿ ಜಯರಾಮ ಸ್ನೇಹಿತೆ, ವಕೀಲೆ ವಿಮಲಾಗೆ ಕೋರ್ಟ್ ಹಾಲ್ 1ರಲ್ಲಿ ಚಾಕು ಇರಿದಿದ್ದಾನೆ. ಸದ್ಯ ಕೇಂದ್ರ ವಿಭಾಗ ಡಿಸಿಪಿ ಶೇಖರ್ ಪ್ರಕರಣ ಸಂಬಂಧ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
Poll (Public Option)

Post a comment
Log in to write reviews