ವಕೀಲೆ ಚೈತ್ರಾ ಗೌಡ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ತಿರುವು..! ತನಿಖೆ ಸಿಸಿಬಿ ಹೆಗಲಿಗೆ

ಬೆಂಗಳೂರು: ವಕೀಲೆ ಚೈತ್ರಾ ಗೌಡ ಆತ್ಮಹತ್ಯೆ ಪ್ರಕರಣದ ತನಿಖೆಯ ಜವಾಬ್ದಾರಿ ಸಿಸಿಬಿ ಹೆಗಲೇರಿದೆ.
ಕೆಎಎಸ್ ಅಧಿಕಾರಿ ಎಸ್.ಎಂ.ಶಿವಕುಮಾರ್ ಅವರ ಪತ್ನಿ, ಚೈತ್ರಾ ಸಂಜಯನಗರದ ಅಶ್ವತ್ಥ ನಗರದ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಮೇ 11ರಂದು ಚೈತ್ರಾ ಗೌಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಸಂಜಯನಗರ ಠಾಣೆ ಪೊಲೀಸರು ಪ್ರಾಥಮಿಕ ತನಿಕೆ ನಡೆಸಿ ಚೈತ್ರ ಅವರದ್ದು ಆತ್ಮಹತ್ಯೆ ಎಂಬ ಅಂತಿಮ ನಿರ್ಧಾರಕ್ಕೆ ಬಂದಿದ್ದರು.
ಆದರೆ ಚೈತ್ರಾ, ಸಾಯುವ ಮುನ್ನ ಮೂರು ತಿಂಗಳ ಹಿಂದೆ ಬರೆದಿದ್ದ ಡೆತ್ ನೋಟ್ ಪತ್ತೆಯಾಗಿದೆ. ಚೈತ್ರಾ ಸಾವು ಆತ್ಮಹತ್ಯೆಯಾದರೂ ಕಾರಣ ಏನು ಎಂಬುದು ಯಕ್ಷಪ್ರಶ್ನೆ ಆಗಿಯೇ ಉಳಿದಿತ್ತು. ಈ ನಿಟ್ಟಿನಲ್ಲಿ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕಮಿಷನರ್ ದಯಾನಂದ ಆದೇಶದ ಮೇರೆಗೆ ಸಿಸಿಬಿ ಮತ್ತೊಂದು ಸುತ್ತಿನ ತನಿಖೆಗೆ ಮುಂದಾಗಿದೆ.
ಶಿವಕುಮಾರ್ ಮರು ವಿಚಾರಣೆ ಸಾಧ್ಯತೆ?
ಪತ್ನಿ ಸಾವಿನ ಬಗ್ಗೆ ಈಗಾಗಲೇ ಹೇಳಿಕೆ ದಾಖಲಿಸಿರುವ ಶಿವಕುಮಾರ್, ಪತ್ನಿ ಜತೆಗಿನ ದಾಂಪತ್ಯ ಅನ್ಯೂನ್ಯವಾಗಿತ್ತು. ಆಕೆ ಖಿನ್ನತೆ ಕುರಿತು ಎಂದಿಗೂ ಹೇಳಿ ಕೊಂಡಿರಲಿಲ್ಲ ಎಂದಿದ್ದಾರೆ. ಈ ಬೆನ್ನಲ್ಲೇ ಸಿಸಿಬಿ ಮತ್ತೊಮ್ಮೆ ಶಿವಕುಮಾರ್ ಅವರನ್ನು ವಿಚಾರಣೆ ನಡೆಸಿ ಚೈತ್ರಾ ಕುರಿತು ಮಾಹಿತಿ ಕಲೆಹಾಕಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ಹೇಳಿವೆ.
Poll (Public Option)

Post a comment
Log in to write reviews