
ಬೆಂಗಳೂರು: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿ ಅಮಾಯಕರ ಕೊಲೆಗಳು ನಡೆಯುತ್ತಿವೆ ಎಂದು ಮಾಜಿ ಶಾಸಕ ಪಿ.ರಾಜೀವ್ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕೃತ್ಯ ಮಾಡಿದರೂ ಪ್ರಭಾವದಿಂದ ಬಚಾವ್ ಆಗಬಹುದು ಎಂಬ ಭಾವನೆ ಹೆಚ್ಚಾಗಿದೆ. ಇದು ಸರಿಯಲ್ಲ. ಕ್ಷುಲ್ಲಕ ಕಾರಣಕ್ಕೆ ಕೊಲೆಗಳು ನಡೆಯುತ್ತಿದ್ದು ಈ ಬಗ್ಗೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕಿದೆ ಎಂದರು.
ಪೊಲೀಸ್ ಠಾಣೆ ಸುತ್ತಲು 144 ಸೆಕ್ಷನ್ ಅಳವಡಿಸುವುದು ಎಂದರೆ ಕಾನೂನು ಸುವ್ಯವಸ್ತೆ ಹದಗೆಟ್ಟಿದೆ ಎಂಬುದಕ್ಕೆ ನಿದರ್ಶನ. ಮಾನ ಪ್ರಾಣಕ್ಕೆ ದೊಡ್ಡ ಘನತೆ ಇದೆ. ಅಮಾಯಕರ ಪ್ರಾಣಹಾನಿಗೆ ಕಾರಣವಾದವರ ವಿರುದ್ಧ ಕಾನೂನಿನಡಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು. ನಟ ದರ್ಶನ್ ಗ್ಯಾಂಗ್ ಮಾಡಿರುವಂತಹ ಕೃತ್ಯಗಳು ಇನ್ನು ಮುಂದೆ ಆಗದಂತೆ ಗೃಹ ಸಚಿವರು ಮತ್ತು ಇಲಾಖೆ ತನ್ನ ಕರ್ತವ್ಯ ಪ್ರಾಮಾಣಿಕವಾಗಿ ಮಾಡಬೇಕು ಎಂದು ಒತ್ತಾಯಿಸಿದರು.
Poll (Public Option)

Post a comment
Log in to write reviews