ನ್ಯೂಜೆರ್ಸಿ: ಆಧುನಿಕ ಯುಗದಲ್ಲಿ ಭಾರತದ ಹೊರಗೆ ನಿರ್ಮಿಸಲಾದ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವು ಅಕ್ಟೋಬರ್ 8 ರಂದು ನ್ಯೂಜೆರ್ಸಿಯಲ್ಲಿ ಉದ್ಘಾಟನೆಯಾಗಲಿದೆ.
ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ನ ದಕ್ಷಿಣಕ್ಕೆ ಸುಮಾರು 60 ಮೈಲಿ ಅಥವಾ ವಾಷಿಂಗ್ಟನ್ ಡಿಸಿಯಿಂದ ಉತ್ತರಕ್ಕೆ ಸುಮಾರು 180 ಮೈಲಿ ದೂರದಲ್ಲಿ, ನ್ಯೂಜೆರ್ಸಿಯ ಪುಟ್ಟ ರಾಬಿನ್ಸ್ವಿಲ್ಲೆ ಟೌನ್‌ಶಿಫ್‌ನಲ್ಲಿ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವಾಗಿರುವ ಬಿಎಪಿಎಸ್ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯ ನಿರ್ಮಾಣವಾಗಿದೆ. 2011 ರಿಂದ 2023 ರವರೆಗೆ 12 ವರ್ಷಗಳವರೆಗೆ ಅಮೆರಿಕದಲ್ಲಿನ 12,500 ಕ್ಕೂ ಹೆಚ್ಚು ಸ್ವಯಂಸೇವಕರ ಪಡೆಯು ಈ ದೇವಸ್ಥಾನ ನಿರ್ಮಿಸಿದೆ. ಅಕ್ಷರಧಾಮ ಎಂದು ಜನಪ್ರಿಯವಾಗಿರುವ ಈ ದೇವಾಲಯ 255 ಅಡಿ x 345 ಅಡಿ x 191 ಅಡಿ ಅಳತೆ ಹೊಂದಿದ್ದು, 183 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಇದನ್ನು ಪ್ರಾಚೀನ ಹಿಂದೂ ಧರ್ಮ ಗ್ರಂಥಗಳ ಪ್ರಕಾರ ವಿನ್ಯಾಸಗೊಳಿಸಲಾಗಿದ್ದು, 10,000 ಪ್ರತಿಮೆಗಳು, ಭಾರತೀಯ ಸಂಗೀತ ವಾದ್ಯಗಳು ಮತ್ತು ನೃತ್ಯ ಪ್ರಕಾರಗಳ ಕೆತ್ತನೆಗಳು ಸೇರಿದಂತೆ ಪ್ರಾಚೀನ ಭಾರತೀಯ ಸಂಸ್ಕೃತಿಯ ವಿನ್ಯಾಸದ ಅಂಶಗಳನ್ನು ಒಳಗೊಂಡಿದೆ.
Post a comment
Log in to write reviews