
ಲಾಪತಾ ಲೇಡಿಸ್’ ಸಿನಿಮಾ ‘ಆಸ್ಕರ್ 2025’ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದೆ. ಕಿರಣ್ ರಾವ್ ನಿರ್ದೇಶನದ ಈ ಚಿತ್ರವನ್ನು ಆಮಿರ್ ಖಾನ್ ಅವರು ನಿರ್ಮಾಣ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ರಿಲೀಸ್ ಆದ ಈ ಚಿತ್ರ ಎಲ್ಲರಿಂದ ಮೆಚ್ಚುಗೆ ಪಡೆಯಿತು. ಒಟಿಟಿಯಲ್ಲಿ ರಿಲೀಸ್ ಆದ ಬಳಿಕ ಮತ್ತೊಂದಷ್ಟು ಮಂದಿ ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.
‘ಲಾಪತಾ ಲೇಡಿಸ್’ ಸಿನಿಮಾ ಮಹಿಳೆಯರ ಸಬಲೀಕರಣದ ಬಗ್ಗೆ ಇದೆ. ಈ ಸಿನಿಮಾದಲ್ಲಿ ನಿಶಾಂಶಿ ಗೋಯಲ್, ಪ್ರತಿಭಾ ರಾಂತಾ, ಸ್ಪರ್ಶ್ ಶ್ರೀವಾಸ್ತವ, ಚಾಯಾ ಕದಮ್, ರವಿ ಕಿಶನ್ ನಟಿಸಿದ್ದಾರೆ. ‘ಲಾಪತಾ ಲೇಡಿಸ್’ ಸಿನಿಮಾ ಆಸ್ಕರ್ ಗೆಲ್ಲಬೇಕು ಎಂಬುದು ಕಿರಣ್ ರಾವ್ ಅವರ ಕನಸಾಗಿತ್ತು. ಈ ಕನಸಿನ ಒಂದು ಮೆಟ್ಟಿಲನ್ನ ಏರಿದ್ದಾರೆ.
‘ಲಾಪತಾ ಲೇಡಿಸ್’ ‘ಅತ್ಯುತ್ತಮ ವಿದೇಶಿ ಸಿನಿಮಾ’ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ. ಚೆನ್ನೈನ್ನಲ್ಲಿ ‘ಭಾರತ ಫಿಲ್ಮ್ ಫೆಡರೇಷನ್’ ಸದಸ್ಯರು ಈ ಘೋಷಣೆ ಮಾಡಿದ್ದಾರೆ. ಈಗ ನಡೆಯಲಿರುವುದು 97ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಆಗಿದೆ.
ಕಳೆದ ವಾರ ಕಿರಣ್ ರಾವ್ ಅವರು ಈ ಬಗ್ಗೆ ಮಾತನಾಡಿದ್ದು. ‘ಆಸ್ಕರ್ಗೆ ನಮ್ಮ ಸಿನಿಮಾ ಆಯ್ಕೆ ಆದರೆ ನನ್ನ ಕನಸು ಈಡೇರಿದಂತೆ. ಅದು ಒಂದು ಪ್ರಕ್ರಿಯೆ. ಲಾಪತಾ ಲೇಡಿಸ್ ಸಿನಿಮಾನ ಅವರು ಪರಿಗಣಿಸುತ್ತಾರೆ ಎಂದು ಭಾವಿಸಿದ್ದೇನೆ. ಅತ್ಯುತ್ತಮ ಸಿನಿಮಾ ಆಯ್ಕೆ ಆಗಲಿದೆ’ ಎಂದು ಅವರು ಭರವಸೆ ಹೊರಹಾಕಿದ್ದರು.
‘ಲಾಪತಾ ಲೇಡಿಸ್’ ಸಿನಿಮಾ 2001ರಲ್ಲಿ ನಡೆಯುವ ಗ್ರಾಮೀಣ ಭಾರತದ ಕಥೆಯನ್ನು ಹೊಂದಿದೆ. ಎರಡು ನವ ವಿವಾಹಿತರ ಕಥೆಯನ್ನು ಹೊಂದಿದೆ. ರೈಲ್ವೆ ಪ್ರಯಾಣದಲ್ಲಿ ವಧು ಇಬ್ಬರೂ ಬದಲಾಗುತ್ತಾರೆ. ಆ ಬಳಿಕ ಅನೇಕರ ಕಣ್ಣು ತೆಗೆಸುವ ಕೆಲಸವನ್ನು ಮಾಡುತ್ತದೆ.
ಆಮಿರ್ ಖಾನ್ ಅವರು ‘ಲಾಪತಾ ಲೇಡಿಸ್’ ಚಿತ್ರ ನಿರ್ಮಾಣ ಮಾಡಿದ್ದಾರೆ. ‘ಧೋಬಿ ಘಾಟ್’ ಬಳಿಕ ಅವರು ನಿರ್ದೇಶನ ಮಾಡಿದ ಎರಡನೇ ಸಿನಿಮಾ ಇದು. ‘ಲಾಪತಾ ಲೇಡಿಸ್’ ಈ ಮೊದಲು ಟೊರೆಂಟೋ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರಸಾರ ಕಂಡಿದೆ.
96ನೇ ಸಾಲಿನ ಆಸ್ಕರ್ಗೆ ಟುವಿನೋ ಥಾಮಸ್ ನಟನೆಯ ‘2018ರಲ್ಲಿ’ ಸಿನಿಮಾ ಆಯ್ಕೆ ಆಗಿತ್ತು. ಆದರೆ, ಸಿನಿಮಾ ಶಾರ್ಟ್ಲಿಸ್ಟ್ ಆಗಿಲ್ಲ. 95ನೇ ಸಾಲಿನಲ್ಲಿ ಭಾರತದ ‘ನಾಟು ನಾಟು..’ ಹಾಡು ಅವಾರ್ಡ್ ಗೆದ್ದಿತ್ತು.
Poll (Public Option)

Post a comment
Log in to write reviews