
ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋದ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ. ಏಪ್ರಿಲ್‌ನಲ್ಲಿ ಒಂದೇ ದಿನ 7 ಲಕ್ಷ ಜನರು ಸಂಚಾರ ನಡೆಸಿ ದಾಖಲೆಯನ್ನೇ ಬರೆದಿದ್ದಾರೆ. ಪೀಕ್ ಅವರ್‌ನಲ್ಲಿ ಮೆಟ್ರೋದಲ್ಲಿ ಕಾಲು ಹಾಕಲು ಜಾಗವಿಲ್ಲದಷ್ಟು ಜನದಟ್ಟಣೆ ಇರುತ್ತದೆ.
ಪ್ರತಿ ಮೆಟ್ರೋ ಬೋಗಿಯಲ್ಲಿ 1629 ಜನರು ಸಂಚಾರ ನಡೆಸಬಹುದು. ಆದರೆ ಪೀಕ್ ಅವರ್‌ನಲ್ಲಿ ಮೆಟ್ರೋ ಹತ್ತಲು ಸಾಧ್ಯವಾಗುತಿಲ್ಲ. ಇದಕ್ಕೆ ಕಾರಣ ಬಿಎಂಆರ್‌ಸಿಎಲ್ ಎದುರಿಸುತ್ತಿರುವ ಬೋಗಿಗಳ ಕೊರತೆಯೇ ಕಾರಣವಾಗಿದೆ.
ನೇರಳೆ ಮತ್ತು ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಸಂಚಾರ ನಡೆಸುತ್ತಿವೆ. ಯೋಜನೆಯ ವರದಿಯಂತೆ ಒಟ್ಟು 78 ರೈಲುಗಳು ಸಂಚಾರ ನಡೆಸಬೇಕಿತ್ತು. ಆದರೆ, ಈಗ ಕೇವಲ 47 ರೈಲುಗಳು ಓಡುತ್ತಿವೆ. ಇದರಿಂದಾಗಿ ಜನರ ದಟ್ಟಣೆ ಹೆಚ್ಚಿದೆ.
Poll (Public Option)

Post a comment
Log in to write reviews