
ಪ್ರಜ್ವಲ್ ರೇವಣ್ಣನದು ಹೊಸ ವಿಡಿಯೋ ಬಿಡುಗಡೆಯಾಗಿದೆ. ಅದು ಲೈಂಗಿಕ ಹಗರಣದಲ್ಲ. ಬದಲಾಗಿ ನಾನೇಲ್ಲೋ ಇದ್ದೀನಿ. ಮೇ. 31 ಕ್ಕೆ ಬರುತ್ತೀನಿ, ಎಸ್ಐಟಿ ವಿಚಾರಣೆಗೆ ಹಾಜರಾಗುತ್ತೀನಿ ಎಂದು ಹೇಳಿ ತಾತ ಎಚ್.ಡಿ.ದೇವೇಗೌಡರ ಕ್ಷಮಾಪಣೆ ಕೇಳಿ, ಚಿಕ್ಕಪ್ಪ ಕುಮಾರಣ್ಣ ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ವಿಡಿಯೋನೂ ಬಿಡುಗಡೆ ಮಾಡಲಾಗಿದೆ.
ವಿಷಯ ಏನಂದರೆ ವಿದೇಶದಲ್ಲಿದ್ದೀನಿ ಎಂದು ಎಲ್ಲೂ ಪ್ರಜ್ವಲ್ ಹೇಳಿಕೊಂಡಿಲ್ಲ. ಅಲ್ಲದೆ ಪ್ರಕರಣ ಸಂಬಂಧ ಯ್ಯೂಟ್ಯೂಬ್ ನೋಡಿ ಡಿಪ್ರೆಷನ್ಗೆ ಹೋಗಿದ್ದೆ ಎನ್ನುತ್ತಾ ಎನೂ ನಡೆದಿಲ್ಲ ಎಂಬಂತೆ ವಿಡಿಯೋದಲ್ಲಿ ಮಾತನಾಡಿದ್ದರೂ, ಹಣೆಯ ಮೇಲಿನ ಪ್ರಸಾದದ ತಿಲಕ ಮತ್ತೆನೋ ಕತೆ ಹೇಳುತ್ತಿದೆ.
ಜೈಲಿನಿಂದ ಬಿಡುಗಡೆಯಾದ ಮೇಲೆ ಶಾಸಕ ರೇವಣ್ಣ ಅವರು ದೇವಸ್ಥಾನದ ಪ್ರದಕ್ಷಿಣೆ ಹಾಕುತ್ತಿದ್ದಾರೆ, ಕಾಕತಾಳೀಯ ಎಂಬಂತೆ ರೇವಣ್ಣ ಅವರು ಭಾನುವಾರ ಧರ್ಮಸ್ಥಳಕ್ಕೆ ಹೋಗಿ ಮಂಜುನಾಥನ ದರ್ಶನ ಪಡೆದಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ರಾಜ್ಯದ ಪ್ರತಿಷ್ಠಿತ ದೇವಸ್ಥಾನ ಒಂದರ ಕುಂಕುಮಾರ್ಚನೆ ಮಾಡಿದ ಪ್ರಸಾದ ರೂಪದ ಕುಂಕುಮ ತಿಲಕ ಪ್ರಜ್ವಲ್ ಹಣೆಯಲ್ಲಿ ಕಂಡು ಬಂದಿದೆ. ಗೊತ್ತಿಲ್ಲ ? ಅಲ್ಲದೆ ತಾನು ವಿದೇಶದಲ್ಲಿರುವ ಬಗ್ಗೆಯೂ ಕೂಡ ಖಚಿತವಾಗಿ ಹೇಳಿಲ್ಲ. ಇವೆಲ್ಲ ಗಮನಿಸಿದರೆ ವಿದೇಶದಲ್ಲಿದ್ದಾನೆ ಎಂಬ ಗುಮ್ಮನನ್ನು ತೋರಿಸಿದಂತಿದೆ. ಅಲ್ಲದೆ ತನಿಖೆಯ ದಾರಿ ತಪ್ಪಿಸಲು ಪಾಸ್‌ಪೋರ್ಟ್ ಇನ್ನಿತರ ಕತೆಗಳನ್ನು ಕಟ್ಟಲಾಗಿದೆ ಎಂಬುದು ಆತನ ವಿಡಿಯೋದಲ್ಲಿ ಕೇಳಿ ಬರುತ್ತಿರುವ ಶಬ್ದಗಳು ಹಾಗೂ ಅಜ್ಞಾತ ಸ್ಥಳದ ಬಗ್ಗೆಯೇ ಹಲವು ಅನುಮಾನಗಳು ಮೂಡುತ್ತಿದೆ ಎನ್ನುತ್ತಿದ್ದಾರೆ ರಾಜಕೀಯ ವಿರೋಧಿಗಳು.
Poll (Public Option)

Post a comment
Log in to write reviews