
ಹೆಚ್ಎಂಟಿ ವಶದಲ್ಲಿದ್ದ ಸುಮಾರು 150 ಕೋಟಿ ರೂ. ಮೌಲ್ಯದ 5 ಎಕರೆ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿರುವುದಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ. ಹೆಚ್ಎಂಟಿಯಿಂದ ಭೂಮಿ ಮರುವಶ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಹೇಳುವುದು ಇಷ್ಟೇ, ಕೋಲಾರದಲ್ಲಿ ಸಸಿ ನೆಡುವುದಕ್ಕೆ ಹೋಗಿದ್ದಾರೆ.
ಮೊದಲು ಶ್ರೀನಿವಾಸಪುರದಲ್ಲಿ ಒಬ್ಬ ಮಾಜಿ ಸ್ವೀಕರ್ ಸುಮಾರು ನೂರಾರು ಎಕರೆ ಅರಣ್ಯ ಭೂಮಿಯನ್ನು ಲೂಟಿ ಹೊಡೆದಿದ್ದಾರೆ. ಅದನ್ನು ಮೊದಲು ಮರುವಶಪಡಿಸಿಕೊಳ್ಳಲಿ ತೀರ್ಪು ಬಂದಿರುವುದನ್ನೆಲ್ಲ ಕುರ್ಚಿ ಕೆಳಗೆ ಇಟ್ಟುಕೊಂಡು ಕುಳಿತಿದ್ದಾರೆ. ಮೊದಲು ಅದನ್ನು ನೋಡಲು ಹೇಳಿ. ಎಷ್ಟು ಏಕರೆ ಲೂಟಿಯಾಗಿದೆ ಅಲ್ಲಿ? ಅದರ ಬಗ್ಗೆ ಚರ್ಚೆ ಮಾಡಿದ್ದೀರಾ? ಇಲ್ಲಿ ಕೋರ್ಟ್ ಇದೆ. ಅಲ್ಲಿ ಪೋಲೀಸ್, ಅರಣ್ಯ ಇಲಾಖೆಯವರು ಬಲವಂತವಾಗಿ ಹೋಗಿ ಬೇಲಿ ಹಾಕಿರಬಹುದು. ಅಂತಿಮವಾಗಿ ನ್ಯಾಯಾಲಯದ ತೀರ್ಪುಗಳಿಗೆ ತಲೆಬಾಗಬೇಕಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
Poll (Public Option)

Post a comment
Log in to write reviews