ಲಂಚ ಪಡೆಯುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ KSRTC ಡಿಸಿ

ವಿಜಯನಗರ : ವಿಜಯನಗರ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್ ಜಗದೀಶ್ (KSRTC ಡಿಸಿ) ಹರಪನಹಳ್ಳಿಯ ಚಾಲಕ ಕಂಡಕ್ಟರ್ ಬಳಿ ಲಂಚ ತೆಗೆದುಕೊಳ್ಳುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
KSRTC ಡಿಸಿ ಜಗದೀಶ್ ಲೋಕಾಯುಕ್ತ ಬಲೆಗೆ ಬಿದ್ದ ಲಂಚಬಾಕ ಅಧಿಕಾರಿಯಾಗದ್ದಾನೆ.
ವಿ.ಎಸ್ ಜಗದೀಶ್ ಡ್ರೈವರ್ ಜೊತೆ ಸೇರಿಸಿಕೊಂಡು ಹಣದ ಡೀಲ್ ಮಾಡಿದ್ದ. ಬುಧವಾರ ರಾತ್ರಿ ಹೊಸಪೇಟೆಯಲ್ಲಿರುವ ಕಚೇರಿ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು, ಚಾಲಕ ಕಂಡಕ್ಟರ್ ನಿಂದ ₹20 ಸಾವಿರ ಲಂಚ ಪಡೆಯುತ್ತಿದ್ದಾಗ ಖೆಡ್ಡಕ್ಕೆ ಬೀಳಿಸಿದ್ದಾರೆ.
ನಿರ್ವಾಹಕರ ಪ್ರಕರಣದಲ್ಲಿ ಇಲಾಖಾ ವಿಚಾರಣೆಯನ್ನು ಕೈಬಿಡಲು ಡಿಸಿ ಜಗದೀಶ್ 25 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದ. ಈ ಪೈಕಿ 5 ಸಾವಿರ ರೂ.ಗಳನ್ನು ಜಗದೀಶ್ ಕಾರು ಚಾಲಕ ಮಲ್ಲಿಕಾರ್ಜುನ್ ಮುಂಗಡವಾಗಿ ಪಡೆದಿದ್ದ. ಇನ್ನು ಉಳಿದ 20 ಸಾವಿರ ರೂ.ಗಳನ್ನು ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿರುವ ತಮ್ಮ ಕಚೇರಿಯಲ್ಲಿ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಜಗದೀಶ್ ಹಾಗೂ ಮಲ್ಲಿಕಾರ್ಜುನನ್ನು ಬಂಧಿಸಿದ್ದಾರೆ.
Poll (Public Option)

Post a comment
Log in to write reviews