
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಹಾಗು ಮಾಳವಿಕಾ ನಾಯರ್ ಅಭಿನಯಿಸಿರುವ ಕೃಷ್ಣಂ ಪ್ರಯಣ ಸಖಿ ಸಿನಿಮಾದ ದ್ವಾಪರ ದಾಟುತ ಸೇರಿ ಮೂರು ಹಾಡುಗಳು ಹಿಟ್ ಆಗಿವೆ. ಇದರ ಬೆನ್ನಲ್ಲೇ ಚಿತ್ರತಂಡವು ನಾಲ್ಕನೇ ಹಾಡನ್ನು ಬಿಡುಗಡೆ ಮಾಡಿದೆ.
ಸೋನು ನಿಗಮ್ ಹಾಡಿರುವ ಹೇ ಗಗನ ಎಂಬ ರೊಮ್ಯಾಂಟಿಕ್ ಹಾಡನ್ನು ಆಗಸ್ಟ್ 4 ರಂದು ಗೋಲ್ಡನ್ ಸ್ಟಾರ್ ಗಣೇಶ್ ಸೇರಿ ಹಲವು ಗಣ್ಯರ ಸಮ್ಮುಖದಲ್ಲಿ ಹಾಡನ್ನು ಬಿಡುಗಡೆ ಮಾಡಲಾಯಿತು.
“ಮೈ ಮ್ಯಾರೇಜ್ ಈಸ್ ಫಿಕ್ಸ್ಡ್” ಹಾಗೂ ಚಿನ್ನಮ್ಮ ಹಾಡುಗಳು ಹಿಟ್ ಆದ ಬಳಿಕ ಬಿಡುಗಡೆಯಾದ ಪಂಜಾಬಿ ಗಾಯಕ ಜಸ್ಕಕರಣ್ ಸಿಂಗ್ ಹಾಡಿರುವ ದ್ವಾಪರ ದಾಟುತ ಹಾಡು ಯುಟ್ಯೂಬ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು ಈಗ ಆಗಸ್ಟ್ 15 ರಂದು ಸಿನಿಮಾ ಬಿಡುಗಡೆ ಮಾಡಲು ಚಿತ್ರ ತಂಡ ತಯಾರಿ ನಡೆಸಿದೆ
“ಕೃಷ್ಣಂ ಪ್ರಣಯ ಸಖಿ” ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರವಾಗಿದ್ದು, ಈ ಚಿತ್ರಕ್ಕೆ ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶೀನಿವಾಸಮೂರ್ತಿ, ಸಾಧುಕೋಕಿಲ,ರಂಗಾಯಣ ರಘು, ಶಶಿಕುಮಾರ್,ಶ್ರುತಿ, ಭಾವನಾ, ಅಶೋಕ್ ರಾಮಕೃಷ್ಣ, ಶಿವಧ್ವಜ್, ರಘುರಾಮ್ ಮಾನಸಿ ಸುಧೀರ್, ಅಂಬುಜ ಗಿರಿ, ಶಿವಣ್ಣ ಬಹುದೊಡ್ಡ ತಾರಬಳಗ ಈ ಚಿತ್ರದಲ್ಲಿದೆ.
Poll (Public Option)

Post a comment
Log in to write reviews