
ಬೆಂಗಳೂರು: ನಟ ಡಾಲಿ ಧನಂಜಯ, ಮೋಕ್ಷಾ ಕುಶಾಲ್ ಮುಖ್ಯ ಭೂಮಿಕೆಯ ʼಕೋಟಿʼ ಸಿನಿಮಾ ಇದೇ ತಿಂಗಳ 14 ರಂದು ಬಿಡುಗಡೆಯಾಗಲಿದೆ.
'ಕೋಟಿ' 250ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಆ ಮೂಲಕ ಬಾಗಿಲು ಮುಚ್ಚುವ ಹಂತದಲ್ಲಿದ್ದ ಹಲವು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಿಗೆ ಕೊಂಚ ಚೇತರಿಕೆ ನೀಡಿದೆ. ಕನ್ನಡದ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ 'ಕೋಟಿ' ಚಿತ್ರದ ವಿತರಣಾ ಹಕ್ಕು ಖರೀದಿಸಿದೆ. ಈ ಬಗ್ಗೆ ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್ ಗೌಡ, ಧನಂಜಯ ಜತೆಗಿನ ನಮ್ಮ ಸಂಬಂಧ 'ಕೋಟಿ' ಮೂಲಕ ಮತ್ತಷ್ಟು ವಿಸ್ತರಿಸಿದೆ. ನಾನು ಸಿನಿಮಾ ನೋಡಿದ್ದೇನೆ. ನಿರ್ದೇಶಕ ಪರಂ ಬರವಣಿಗೆ ಮತ್ತು ಚಿತ್ರಕಥೆ ಹೆಣೆದಿರುವ ಫ್ಯಾಮಿಲಿ ಡ್ರಾಮಾ ಕಥೆ ನೋಡಿ ಥ್ರಿಲ್ ಆಗಿದ್ದೇನೆ ಎಂದಿದ್ದಾರೆ. ಪರಂ ಚೊಚ್ಚಲ ನಿರ್ದೇಶನದ ಚಿತ್ರ 'ಕೋಟಿ'. ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
Poll (Public Option)

Post a comment
Log in to write reviews