
ನಟ ಕೋಮಲ್ ನಟಿಸಿರುವ ಯಲಾ ಕುನ್ನಿ ಸಿನಿಮಾದ ಮುಹೂರ್ತ ಇತ್ತಿಚಿಗೆ ನೆರವೇರಿದ್ದು ಈ ಚಿತ್ರದ ಮೂಲಕ ಹಿರಿಯ ನಟ ವಜ್ರಮುನಿ ಮೊಮ್ಮಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಸೌಭಾಗ್ಯ ಸಿನಿಮಾಸ್ ಲಾಂಛನದಲ್ಲಿಮಹೇಶ್ ಗೌಡ್ರು ನಿರ್ಮಿಸುತ್ತಿರುವ ‘ಎಲಾ ಕುನ್ನಿ’ ಚಿತ್ರವನ್ನು ಎನ್.ಆರ್. ಪ್ರದೀಪ ನಿರ್ದೇಶಿಸುತ್ತಿದ್ದಾರೆ. ಇದಕ್ಕೂ ಮುನ್ನ ಓಂಪ್ರಕಾಶ್ ರಾವ್, ಮುಸ್ಸಂಜೆ ಮಹೇಶ್ ಮುಂತಾದ ನಿರ್ದೇಶಕರ ಜತೆಗೆ ಕೆಲಸ ಮಾಡಿರುವ ಪ್ರದೀಪ್ಗೆ ಇದು ಮೊದಲ ಚಿತ್ರ. 1981ರ ಕಾಲಘಟ್ಟದಲ್ಲಿನಡೆಯುವ ಕಥೆ ಇದಾಗಿದ್ದು, ಶ್ರೀರಂಗಪಟ್ಟಣ ಹಾಗೂ ಮೈಸೂರು ಸುತ್ತಮುತ್ತಲಿನ ಹಳ್ಳಿ ಪರಿಸರದಲ್ಲಿಚಿತ್ರೀಕರಣ ಮಾಡಲಾಗುವುದಂತೆ. ಚಿತ್ರದಲ್ಲಿವಜ್ರಮುನಿಯಾಗಿ ಕೋಮಲ್ ರೆಟ್ರೋ ಲುಕ್ನಲ್ಲಿಕಾನಿಸಿಕೊಳ್ಳುತ್ತಿದ್ದಾರೆ. ಹಿರಿಯ ಕಲಾವಿದ ಮುಸುರಿ ಕೃಷ್ಣಮೂರ್ತಿ ಅವರ ಮಗ ಜಯಸಿಂಹ ಮುಸುರಿ, ಜಗ್ಗೇಶ್ ಅವರ ಕಿರಿಯ ಮಗ ಯತಿರಾಜ್ ಹಾಗೂ ‘ಫ್ರೆಂಚ್ ಬಿರಿಯಾನಿ’ ಖ್ಯಾತಿಯ ಮಹಾಂತೇಶ್ ಮುಂತಾದವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಾಲಿವುಡ್ನಲ್ಲೂ ‘ಕಬ್ಜ’ ಹವಾ; ಬುಲೆಟ್ ಸವಾರಿ ಮಾಡಿದ ಉಪೇಂದ್ರ ‘ಯಲಾ ಕುನ್ನಿ – ಮೇರಾ ನಾಮ್ ವಜ್ರಮುನಿ!’ ಚಿತ್ರಕ್ಕೆ ನಿರ್ದೇಶಕ ಪ್ರದೀಪ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುತ್ತಿದ್ದಾರೆ. ಧರ್ಮವಿಶ್ ಸಂಗೀತ, ಉದಯ್ ಲೀಲಾ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿರಲಿದೆ.
Poll (Public Option)

Post a comment
Log in to write reviews