ಮೈಸೂರು: ಲೋಕಸಭಾ ಚುನಾವಣಾ ಪರಾಜಿತ ಅಭ್ಯರ್ಥಿ ಲಕ್ಷ್ಮಣ್ ವಿರುದ್ಧ ಬಿಜೆಪಿ ಮುಖಂಡ ಕಿರಣ್ ಗೌಡ ಕಿಡಿ ಕಾರಿದ್ದಾರೆ. ಮತದಾರರು ಸ್ಯಾಡಿಸ್ಟ್‌ಗಳು ಎಂಬ ಹೇಳಿಕೆ ನೀಡಿದ್ದ ಲಕ್ಷ್ಮಣ್, ಒಬ್ಬ ಅರೆ ಹುಚ್ಚ ಎಂಬುದನ್ನ ಮತ್ತೆ ಮತ್ತೆ ಸಾಭೀತು ಪಡಿಸುತ್ತಿದ್ದಾರೆ. ಆರೂವರೆ ಲಕ್ಷ ಮತ ಪಡೆದು ಮತದಾರ ಪ್ರಭುಗಳ ಬಗ್ಗೆ ಬಹಳ ಹಗುರವಾಗಿ ಮಾತನಾಡಿರುವುದು ಖಂಡನೀಯ. ಮತದಾರರು ಇವನ ಮುಖ ನೋಡಿ ಮತ ಹಾಕಿಲ್ಲ. ಕಾಂಗ್ರೆಸ್ ಬಿಟ್ಟಿ ಭಾಗ್ಯಗಳಿಂದ ಬಂದಿರುವ ಮತಗಳು. ಈಗಾಗಲೇ ಐದು ಚುನಾವಣೆಗಳಲ್ಲಿ ಸೋತು ಸುಣ್ಣವಾಗಿ ಹತಾಶೆಯಿಂದ ಈ ರೀತಿ ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಕೂಡಲೇ ನಿಮ್ಮ ಹೇಳಿಕೆ ಹಿಂಪಡೆಯಬೇಕು ಇಲ್ಲದಿದ್ದರೆ, ಜನರು ನೀವು ಹೋಗುವ ಕಡೆ ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಲಕ್ಷ್ಮಣ್ ವಿರುದ್ಧ ವಾಗ್ದಾಳಿ ನಡೆಸಿದರು.
Poll (Public Option)

Post a comment
Log in to write reviews