
ಬೆಂಗಳೂರು: ಕೇಂದ್ರ ಸಚಿವ HD ಕುಮಾರಸ್ವಾಮಿ ಅವರು ಇಂದು (ಜೂನ್ 18 ಮಂಗಳವಾರ) ಬೆಂಗಳೂರಿನಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿ (KIOCL) ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಮೊದಲಿಗೆ ಕುಮಾರಸ್ವಾಮಿ ಕಂಪನಿಯ ಆವರಣದಲ್ಲಿ ಗಿಡ ನೆಟ್ಟ ಮಂಗಳೂರು ಉಕ್ಕು ತಯಾರಿಕ ಘಟಕದ ಪ್ರತಿಕೃತಿ ವೀಕ್ಷಿಸಿದರು .ಬಳಿಕ ಉನ್ನತ ಅಧಿಕಾರಿಗಳ ಸಭೆ ನಡೆಸಿದರು. ಕೆಐಒಸಿಎಲ್ ಪುನಶ್ಚೇತನಕ್ಕೆ ಸಂಬಂಧಿಸಿದ ಪ್ರಸ್ತಾವನೆ,ಮಂಗಳೂರಿನಲ್ಲಿರುವ ಉಕ್ಕು ತಯಾರಿಕಾ ಘಟಕದ ಕಾರ್ಯಾಚರಣೆ, ಹೊಸ ಉತ್ಪನ್ನಗಳ ಉತ್ಪಾದನೆ ಬಗ್ಗೆ ಸಚಿವರು ಪರಿಶೀಲನೆ ಎಂದು ಮೂಲಗಳು ತಿಳಿಸಿವೆ. ಈ ವೇಳೆ ಸಭೆಯಲ್ಲಿ ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗಂಟಿ ವೆಂಕಟ ಕಿರಣ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.
Poll (Public Option)

Post a comment
Log in to write reviews