
ಗುಜರಾತ್: ತನ್ನ ತಾಯಿಯನ್ನೇ ಕೊಂದು ಬಳಿಕ ಆಕೆಯ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಸ್ವಾರಿ ಅಮ್ಮಾ ಎಂದು ಪೋಸ್ಟ್ ಹಾಕಿರುವ ಆಘಾತಕಾರಿ ಘಟನೆಯೊಂದು ಗುಜರಾತ್ನ ರಾಜ್ಕೋಟ್ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ಆರೋಪಿ ಮಗನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ರಾಜ್ಕೋಟ್ನ ವಿಶ್ವವಿದ್ಯಾಲಯ ರಸ್ತೆಯಲ್ಲಿರುವ ಭಗತ್‌ಸಿಂಗ್ ಗಾರ್ಡನ್ನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದ್ದು, ಜ್ಯೋತಿಬೆನ್ ಗೋಸಾಯಿ(48) ಮೃತ ಮಹಿಳೆಯಾಗಿದ್ದು. ನೀಲೇಶ್ ಗೋಸಾಯಿ ಆರೋಪಿಯಾಗಿದ್ದಾನೆ. ಅಪರಾಧ ಎಸಗಿದ ಬಳಿಕ ತನ್ನ ತಾಯಿಯ ಮೃತದೇಹದ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ “ಕ್ಷಮಿಸಿ ತಾಯಿ ನಾನು ನಿನ್ನನ್ನು ಕೊಲ್ಲುತ್ತಿದ್ದೇನೆ, ನಾನು ನಿನ್ನನ್ನು ಕಳೆದುಕೊಳ್ಳುತ್ತೇನೆ, ಓಂ ಶಾಂತಿ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಹಾಕಿದ್ದಾನೆ. ಮತ್ತೊಂದು ಪೋಸ್ಟ್ನಲ್ಲಿ, “ನಾನು ನನ್ನ ತಾಯಿಯನ್ನು ಕೊಲ್ಲುತ್ತಿದ್ದೇನೆ, ನನ್ನ ಜೀವನ ಕಳೆದುಹೋಗಿದೆ, ಕ್ಷಮಿಸಿ ಅಮ್ಮ, ಓಂ ಶಾಂತಿ, ಮಿಸ್ ಯೂ ಅಮ್ಮ ” ಎಂದು ಬರೆದುಕೊಂಡಿದ್ದಾನೆ
ಇತ್ತ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹತ್ತಿರದ ಮನೆಯವರು ಜ್ಯೋತಿಬೆನ್ ಮನೆಯ ಬಳಿ ಹೋದಾಗ ಮಗ ತನ್ನ ತಾಯಿಯ ಹೆಣದ ಜೊತೆ ಇರುವುದು ಕಂಡು, ಕೂಡಲೇ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಬಂದು ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜ್ಯೋತಿಬೆನ್ ಅವರು ಹಲವು ವರ್ಷಗಳಿಂದ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ, ಇದು ತಾಯಿ ಮತ್ತು ಮಗನ ನಡುವೆ ಆಗಾಗ ಜಗಳಕ್ಕೆ ಕಾರಣವಾಗುತ್ತಿತ್ತು ಎನ್ನಲಾಗಿದೆ.
ಘಟನೆಯ ದಿನ ತಾಯಿ ಮತ್ತು ಮಗನ ನಡುವೆ ಜಗಳ ನಡೆದಿದ್ದು ಇದು ವಿಕೋಪಕ್ಕೆ ತಿರುಗಿ ಮಗ ಚಾಕುವಿನಿಂದ ಇರಿದು ಕೊಲ್ಲಲು ಮುಂದಾಗಿದ್ದಾನೆ ಆದರೆ ತಾಯಿ ತಡೆದಿದ್ದಾರೆ ಇದಾದ ಬಳಿಕ ಅಲ್ಲೇ ಇದ್ದ ಬಟ್ಟೆಯಿಂದ ಮುಖಕ್ಕೆ ಸುತ್ತಿ ಹತ್ಯೆ ಮಾಡಿ ಬಳಿಕ ತಾಯಿ ಜೊತೆ ಫೋಟೋ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಸಾಗಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Poll (Public Option)

Post a comment
Log in to write reviews