2024-09-19 05:01:06

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ತಾಯಿಯೇ ನನ್ನ ಸ್ಫೂರ್ತಿ “ಅಮ್ಮಾ ನೂರು ಕೋಟಿಯಲ್ಲಿ ಒಬ್ಬಳು ನೀನು” ಎಂದು ಪೋಸ್ಟ ಮಾಡಿದ ಪವಿತ್ರಾ ಗೌಡ ಮಗಳು ಖುಷಿ ಗೌಡ

ಬೆಂಗಳೂರು: ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಅವರೀಗ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಹೊರಗಡೆ ಇರುವ ಪವಿತ್ರಾ ಗೌಡ ಅವರ ಏಕೈಕ ಮಗಳು ಖುಷಿ ಗೌಡ ಅವಕಾಶ ಸಿಕ್ಕಾಗಲೆಲ್ಲಾ ಜೈಲಿಗೆ ಹೋಗಿ ತಾಯಿಯನ್ನು ನೋಡಿಕೊಂಡು ಬರುತ್ತಿದ್ದಾರೆ. ಈಗ ಅವರು ಸೋಶಿಯಲ್ ಮೀಡಿಯಾ ಮೂಲಕ ತಾಯಿ ಬಗ್ಗೆ ಮಾತನಾಡಿದ್ದಾರೆ

ಖುಷಿ ಗೌಡ ಪೋಸ್ಟ್ ಏನು ಬರೆದಿದ್ದಾರೆ?

“ತಾಯಿಯೇ ನನ್ನ ಸ್ಫೂರ್ತಿ, ಸಂದರ್ಭ ಏನೇ ಇರಲಿ ಅವಳು ನನಗೆ ಹೇಗೆ ಗಟ್ಟಿ ಆಗಿರಬೇಕು ಅಂತ ಹೇಳಿಕೊಟ್ಟಿದ್ದಾಳೆ. ಅವಳು ನನಗೆ ಎಂದಿಗೂ ಬೆಂಬಲವಾಗಿಯೇ ಇದ್ದಳು. ಅವಳು ನೂರು ಕೋಟಿಯಲ್ಲಿ ಒಬ್ಬಳು. ನನಗೆ ಅಂಥ ವ್ಯಕ್ತಿ ಸಿಗೋದಿಲ್ಲ. ಅವಳ ರೀತಿ ತಾಯಿ ಪಡೆಯಲು ನಾನು ಅದೃಷ್ಟ ಮಾಡಿದ್ದೆ. ಲವ್ ಯು ಅಮ್ಮಾ” ಎಂದು ಖುಷಿ ಗೌಡ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.


ತಾಯಿ ಉದ್ಯಮವನ್ನು ನೋಡಿಕೊಳ್ತಿರುವ ಖುಷಿ ಗೌಡ

ಪವಿತ್ರಾ ಗೌಡ ಅವರು ಜೈಲಿಗೆ ಹೋದಾಗಿನಿಂದ ಖುಷಿ ಗೌಡ ಅವರು ಆಗಾಗ ಜೈಲಿಗೆ ಹೋಗಿ ತಾಯಿಯನ್ನು ನೋಡಿಕೊಂಡು ಬರುತ್ತಿದ್ದಾರೆ. ಇನ್ನು ತಂದೆ ಸಂಜಯ್ ಸಿಂಗ್ ಬಳಿಯೂ ಮಾತನಾಡಿದ್ದ ಖುಷಿ ಗೌಡ, “ಧೈರ್ಯವಾಗಿರಿ, ಏನೂ ಆಗೋದಿಲ್ಲ, ನಾನು ಸ್ಟ್ರಾಂಗ್ ಆಗಿದ್ದೇನೆ” ಅಂತ ಹೇಳಿದ್ದರಂತೆ. ಸದ್ಯ ಅಜ್ಜ-ಅಜ್ಜಿ, ಮಾವನ ಆರೈಕೆಯಲ್ಲಿ ಬೆಳೆಯುತ್ತಿರುವ ಖುಷಿ ಗೌಡ ಅವರು ತಾಯಿಯ ‘ರೆಡ್ ಕಾರ್ಪೆಟ್ ಸ್ಟುಡಿಯೋ’ವನ್ನು ಕೂಡ ನೋಡಿಕೊಳ್ಳುತ್ತಿದ್ದಾರಂತೆ. 15 ವರ್ಷದ ಖುಷಿ ಗೌಡ ಅವರು ‘ರೆಡ್ ಕಾರ್ಪೆಟ್ ಸ್ಟುಡಿಯೋ’ದ ಹೊಸ ಡಿಸೈನರ್ ಬಟ್ಟೆಗಳನ್ನು ಅವರ ಅಕೌಂಟ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

Post a comment

No Reviews