
ನವದೆಹಲಿ: ಎನ್‌ಡಿಎ ಸರ್ಕಾರ ಪತನವಾಗಲಿದೆ ಎಂಬ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಜಾಸತ್ತಾತ್ಮಕ ಮನೋಭಾವನೆ ನೋಡಿದ ಅನಂತರ ಖರ್ಗೆ ಅವರು ಸರ್ಕಾರ ಬೀಳಬಹುದು ಎಂದು ಭಾವಿಸಿದರೆ, ಅವರು ಮೂರ್ಖರ ಸ್ವರ್ಗದಲ್ಲಿ ವಾಸಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಎನ್‌ಡಿಎ ಅಲ್ಪಮತದ ಸರ್ಕಾರವಾಗಿದ್ದು, ಇದು ಆಕಸ್ಮಿಕವಾಗಿ ಅಧಿಕಾರಕ್ಕೆ ಬಂದಿದೆ. ಮೋದಿಗೆ ಜನಾದೇಶವಿಲ್ಲ ಮತ್ತು ಯಾವ ಕ್ಷಣದಲ್ಲಿಸರ್ಕಾರ ಪತನವಾಗಬಹುದು. ಆದರೂ ಅದು ಮುಂದುವರಿಯಬೇಕು ಎಂದು ಬಯಸುತ್ತೇವೆ. ದೇಶಕ್ಕೆ ಒಳ್ಳೆಯದಾಗಬೇಕು. ದೇಶ ಬಲಿಷ್ಠಗೊಳಿಸಲು ನಾವು ಒಂದಾಗಿ ಕೆಲಸ ಮಾಡಲು ತಯಾರಿದ್ದೇವೆ. ಆದರೆ ಯಾವುದಾದರೂ ಚೆನ್ನಾಗಿ ನಡೆಯದಂತೆ ನೋಡಿಕೊಳ್ಳುವ ಗುಣ ನಮ್ಮ ಪ್ರಧಾನಿಗಳಿಗಿದೆ. ದೇಶಕ್ಕಾಗಿ ನಾವು ಸಹಕಾರ ನೀಡಲು ಸಿದ್ಧರಿದ್ದೇವೆ ಎಂದು ಖರ್ಗೆ ತಿಳಿಸಿದರು.
Poll (Public Option)

Post a comment
Log in to write reviews