
ತಿರುವನಂತಪುರ: ಶತ್ರು ಭೈರವಿ ಯಾಗ ನಡೆಸಲಾಗುತ್ತಿದೆ ಎಂದಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿರುವ ಕೇರಳದ ಸಚಿವೆ ಆರ್. ಬಿಂದು, ನಮ್ಮ ರಾಜ್ಯದಲ್ಲಿ ಅಂತಹ ಆಚರಣೆಗಳಿಲ್ಲ ಎಂದಿದ್ದಾರೆ.
ಕರ್ನಾಟಕ ಸರ್ಕಾರ, ಸಿಎಂ ಸಿದ್ದರಾಮಯ್ಯ ಮತ್ತು ತಮ್ಮನ್ನು ಗುರಿಯಾಗಿಸಿ ಕೇರಳದ ದೇವಸ್ಥಾನದ ಬಳಿ ಪ್ರಾಣಿ ಬಲಿ ನಡೆಸಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಯಿಸಿರುವ ಕೇರಳದ ಸಚಿವೆ ಆರ್. ಬಿಂದು, ಡಿ.ಕೆ.ಶಿವಕುಮಾರ್ ಆರೋಪ ಅರ್ಥಹೀನವಾದದ್ದು. ಕೇರಳದಲ್ಲಿ ಇಂಥ ಆಚರಣೆಗಳಿಲ್ಲ. ದೇಶದ ಇತರ ಭಾಗಗಳಲ್ಲಿ ಸಮಾಜವನ್ನು ಮತ್ತೆ ಕತ್ತಲೆಕೂಪಕ್ಕೆ ಎಳೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.
ಅಲ್ಲದೆ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ಆಧಾರ ರಹಿತ ಹೇಳಿಕೆ ನೀಡುವುದು ದುರದೃಷ್ಟಕರ ಮತ್ತು ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Poll (Public Option)

Post a comment
Log in to write reviews