
ದೆಹಲಿ: ಒಂದು ಮಿಲಿಯನ್‌ಗೂ ಹೆಚ್ಚು ಭಾರತೀಯ ಕಾಗೆಗಳನ್ನು ಕೊಲ್ಲಲು ಕೀನ್ಯಾ ಸರ್ಕಾರ ಮುಂದಾಗಿದೆ. ಕಳೆದ ಹಲವಾರು ದಶಕಗಳಿಂದ ಕೀನ್ಯಾದಲ್ಲಿರುವ ಭಾರತೀಯ ಕಾಗೆಗಳು ಪ್ರವಾಸಿಗರಿಗೆ ಮತ್ತು ಹೋಟೆಲ್ ಉದ್ಯಮಕ್ಕೆ ತೊಂದರೆ ನೀಡುತ್ತಿದ್ದು ಈ ಹಿನ್ನಲೆಯಲ್ಲಿ 2024 ರ ಅಂತ್ಯದ ವೇಳೆಗೆ ಕೀನ್ಯಾದ ಕರಾವಳಿ ಪ್ರದೇಶದಲ್ಲಿ ಒಂದೂ ಮಿಲಿಯನ್‌ಗೂ ಅಧಿಕ ಕಾಗೆಗಳನ್ನು ಕೊಲ್ಲಲು ಆದೇಶ ಹೊರಡಿಸಿದೆ ಎಂದು ಕೀನ್ಯಾ ವಲ್ಡ್ ಲೈಫ್ ಸರ್ವಿಸ್ ತಿಳಿಸಿದೆ.
1940ರಲ್ಲಿ ಭಾರತದಿಂದ ಕೀನ್ಯಾಗೆ ವಲಸೆ ಹೋಗಿದ್ದ ಈ ಕಾಗೆಗಳಿಂದಾಗಿ ಕೀನ್ಯಾ ಮೂಲದ ಪಕ್ಷಿಗಳ ಸಂತತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂದು ಕೀನ್ಯಾ ಸರ್ಕಾರ ಆರೋಪಿಸಿದೆ. ಅಷ್ಟೇ ಅಲ್ಲದೆ ಊಟ ಮಾಡುವಾಗ ಪ್ರವಾಸಿಗರಿಗೆ ಸಾಕಷ್ಟು ಕಿರುಕುಳ ನೀಡುತ್ತಿದೆ ಇದರಿಂದಾಗಿ ಹೋಟೆಲ್ ಉದ್ಯಮಕ್ಕೂ ಒತ್ತಡ ಬೀಳುತ್ತಿದೆ. ಈ ನಿಟ್ಟಿನಲ್ಲಿ ಕೀನ್ಯಾ ಸರ್ಕಾರ ಕಾಗೆಗಳನ್ನು ಕೊಲ್ಲುವ ತೀರ್ಮಾನ ಕೈಗೆತ್ತಿಕೊಂಡಿದೆ ಎನ್ನಲಾಗುತ್ತಿದೆ.
Poll (Public Option)

Post a comment
Log in to write reviews