
ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕ್ಯಾಂಟೀನ್ನಲ್ಲಿ ಸಿಬ್ಬಂದಿಗೆ ನೀಡಿದ ಆಹಾರದಲ್ಲಿ ಹುಳು ಪತ್ತೆಯಾಗಿದೆ ಎಂದು ವರದಿಯಾಗಿದೆ.
ವಿಮಾನ ನಿಲ್ದಾಣದ ಆಲ್ಫಾ ಕಟ್ಟಡದಲ್ಲಿರುವ ಕ್ಯಾಂಟೀನ್ನಲ್ಲಿ ಆಹಾರದಲ್ಲಿ ಹುಳ ಪತ್ತೆಯಾಗಿದೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಜೊತೆಗೆ, ಕ್ಯಾಂಟೀನ್ನ ಆಹಾರ ಸಾಮಗ್ರಿಗಳ ಮೇಲೆ ಇಲಿಗಳು ಓಡಾಡುತ್ತಿರುವುದೂ ಪತ್ತೆಯಾಗಿದೆ.
ಆಹಾರದಲ್ಲಿ ಹುಳ ಇರುವುದು ಮತ್ತು ಆಹಾರ ಸಾಮಗ್ರಿಗಳ ಮೇಲೆ ಇಲಿ ಓಡಾಡುತ್ತಿರುವುದನ್ನು ವಿಮಾನ ನಿಲ್ದಾಣದ ಸಿಬ್ಬಂದಿ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.
ಈ ಕ್ಯಾಂಟೀನ್ನಲ್ಲಿ ಸ್ವಚ್ಛತೆ ಇಲ್ಲ. ಆಹಾರದ ಗುಣಮಟ್ಟವೂ ಕಳಪೆಯಾಗಿದೆ ಎಂದು ವಿಡಿಯೋದಲ್ಲಿ ಸಿಬ್ಬಂದಿ ವಿಮಾನ ನಿಲ್ದಾಣದ ಬಗ್ಗೆ ದೂರಿದ್ದಾರೆ.
Poll (Public Option)

Post a comment
Log in to write reviews