ಬಳ್ಳಾರಿ: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಎ1 ಆರೋಪಿ ನಟ ದರ್ಶನ್ಗೆ ಬೆನ್ನುನೋವಿನ ಸಮಸ್ಯೆ ಇದೆ ಎಂದು ಕುಟುಂಬಸ್ಥರು ಪೊಲೀಸರಿಗೆ ಮೆಡಿಕಲ್ ರಿಪೋರ್ಟ್ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಜೈಲಧಿಕಾರಿಗಳು ಆರೋಪಿ ದರ್ಶನ್ಗೆ ಇಂದು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ಸದ್ಯ ಬಳ್ಳಾರಿ ಜೈಲುನಲ್ಲಿರುವ ನಟ ದರ್ಶನ್ಗೆ ಜೈಲು ಡಾಕ್ಟರ್ ಮೂಲಕ ವೈದ್ಯಕೀಯ ರಿಪೋರ್ಟ್ ಪರಿಶೀಲನೆ ನಡೆಸಲಾಯಿತು.
ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಜೈಲು ವೈದ್ಯರು ದರ್ಶನ್ ಆರೋಗ್ಯ ತಪಾಸಣೆ ಮಾಡಿದ್ದು, ಬೆನ್ನು ನೋವಿನ ತೀವ್ರತೆ ಬಗ್ಗೆ ವೈದ್ಯಕೀಯ ತಪಾಸಣೆ ಬಳಿಕ ಡಿಐಜಿಗೆ ಸಲ್ಲಿಕೆ ಮಾಡಲಾಗುವುದು. ಸದ್ಯ ಸಾಮಾನ್ಯ ಕೈದಿಯಂತೆ ದರ್ಶನ್ಗೂ ಜೈಲಲ್ಲಿ ತಪಾಸಣೆ ನಡೆಸಲಾಗಿದೆ. ಬೆನ್ನು ನೋವಿನ ಕಾರಣ ಕೆಲವು ಮಾತ್ರೆಗಳ ಬಗ್ಗೆ ದರ್ಶನ್ ಮನವಿ ಮಾಡಿದ್ದರು. ವೈದ್ಯರ ತಪಾಸಣೆ ಬಳಿಕ ಅಗತ್ಯ ಇದ್ದರೆ ಸರ್ಕಾರಿ ಆಸ್ಪತ್ರೆಯ ಮೆಡಿಸಿನ್ಗಳನ್ನ ಕೊಡುವುದಾಗಿ ಜೈಲಧಿಕಾರಿಗಳು ತಿಳಿಸಿದ್ದಾರೆ.
Post a comment
Log in to write reviews