2024-09-19 09:04:57

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಅಭಿವೃದ್ಧಿಯ ಅಸಲಿ ಮಾದರಿಯಾಗಿ "ಕರ್ನಾಟಕ ಮಾಡೆಲ್" ಹೊರಹೊಮ್ಮುತ್ತಿದೆ: ಸಚಿವ ಪ್ರಿಯಾಂಕ್ ಖಗೆ೯

ಬಿಜೆಪಿ ನಾಯಕರು ಜಪಿಸುತ್ತಿದ್ದ ಗುಜರಾತ್ ಮಾಡೆಲ್ - ನಕಲಿ ಎಂದು ದೇಶಕ್ಕೆ ತಿಳಿಯಿತು, ಯುಪಿ ಮಾಡೆಲ್ - ದ್ವೇಷಕ್ಕೆ ಮಾತ್ರ ಮಾಡೆಲ್ ಎಂದು ರಾಜ್ಯದ ಜನತೆ ತಿರಸ್ಕರಿಸಿದರು. ಅಭಿವೃದ್ಧಿಯ ಅಸಲಿ ಮಾದರಿಯಾಗಿ "ಕರ್ನಾಟಕ ಮಾಡೆಲ್" ಹೊರಹೊಮ್ಮುತ್ತಿದೆ, ಎಂದು ಸಚಿವ ಪ್ರಿಯಾಂಕ್ ಖಗೆ೯ ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವೀಟ್ ನಲ್ಲಿ  ಉತ್ತರ ಪ್ರದೇಶದ ಸಾರಿಗೆ ಅಧಿಕಾರಿಗಳ ನಿಯೋಗವು ಕರ್ನಾಟಕದ ಸಾರಿಗೆ ವ್ಯವಸ್ಥೆಯ ಸಮರ್ಥ ಕಾರ್ಯವೈಖರಿಯ ಬಗ್ಗೆ ಅರಿಯಲು ಬಿಎಂಟಿಸಿಗೆ ಭೇಟಿ ನೀಡಿ ರಾಜ್ಯ ಸಾರಿಗೆ ಇಲಾಖೆ ಅಳವಡಿಸಿಕೊಂಡಿರುವ ವಿವಿಧ ವಿನೂತನ ವ್ಯವಸ್ಥೆಗಳ ಮಾಹಿತಿ ಪಡೆದರು.ಇತರ ರಾಜ್ಯಗಳಿಗಷ್ಟೇ ಅಲ್ಲ, ಸ್ವತಃ ಕೇಂದ್ರ ಸರ್ಕಾರಕ್ಕೆ, ಪ್ರಧಾನಿ ಮೋದಿಯವರನ್ನೂ ಕರ್ನಾಟಕ ಮಾಡೆಲ್ ಪ್ರೇರೇಪಿಸಿದೆ ಎನ್ನುವುದಕ್ಕೆ ಅವರು ಅಪಹರಿಸಿದ "ಗ್ಯಾರಂಟಿ" ಪದವೇ ಸಾಕ್ಷಿ! ಐಟಿ ,ಬಿಟಿ ಕ್ಷೇತ್ರದಲ್ಲಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ, ಅರ್ಥವ್ಯವಸ್ಥೆಯಲ್ಲಿ, ತೆರಿಗೆ ಸಂಗ್ರಹದಲ್ಲಿ ಈಗಾಗಲೇ ನಾವು ನಂ1 ಸ್ಥಾನದಲ್ಲಿದ್ದೇವೆ. ನಮ್ಮ ಸರ್ಕಾರ ಕರ್ನಾಟಕವನ್ನು ಇನ್ನೂ ಹತ್ತು ಹಲವು ಕ್ಷೇತ್ರಗಳಲ್ಲಿ ದೇಶಕ್ಕೆ ಮಾದರಿ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸುತ್ತಿದೆ. ಎಂದು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
 

Post a comment

No Reviews