2024-12-24 06:18:16

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸಿದ್ದು ಸಂಪುಟದ ಮತ್ತೊಬ್ಬ ಮಿನಿಸ್ಟರ್​​ಗೆ ಕಂಟಕ – ಪ್ರಿಯಾಂಕ್​​ ಖರ್ಗೆ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಬಳಿಕ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ಹಗರಣ ಆರೋಪವೊಂದು ಕೇಳಿ ಬಂದಿದ್ದು, ಈ ಸಂಬಂಧ ಪ್ರಿಯಾಂಕ್ ಖರ್ಗೆಯವರ ವಿರುದ್ಧ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮಂಗಳವಾರ ದೂರು ನೀಡಿದ್ದಾರೆ.
ಈ ದೂರಿನಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಫ್ಯಾಮಿಲಿಗೆ ದೊಡ್ಡ ಶಾಕ್​​​ ಎದುರಾಗಿದ್ದು, ಖರ್ಗೆ ಕುಟುಂಬದವರು KIADBಯಿಂದ ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ 5 ಎಕರೆ ಜಾಗ ಪಡೆದ ಆರೋಪ ಗಂಬೀರ ಆರೋಪ ಕೇಳಿಬಂದಿದೆ.

ಸಚಿವರಾಗಿ ಪ್ರಿಯಾಂಕ್‌ ಖರ್ಗೆ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರು ಸಲ್ಲಿಸಲಾಗಿದ್ದು, ಸಚಿವ ಸಂಪುಟದಿಂದ ಪ್ರಿಯಾಂಕ್​ ಖರ್ಗೆ ವಜಾ ಮಾಡಬೇಕು, ಸಿದ್ದಾರ್ಥ ವಿಹಾರ ಟ್ರಸ್ಟ್​ಗೆ ನೀಡಿರುವ ಜಮೀನು ವಾಪಸ್‌ ಪಡೆಯಬೇಕು ಎಂದು ರಾಜ್ಯಪಾಲರ ಭೇಟಿ ಮಾಡಿ ಮನವಿ ಸಮೇತ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ದೂರು ಸಲ್ಲಿಸಿದ್ದಾರೆ
ಮಲ್ಲಿಕಾರ್ಜುನ ಖರ್ಗೆ ಕುಟುಂಬ ನಡೆಸುತ್ತಿರುವ ಸಿದ್ದಾರ್ಥ ವಿಹಾರ ಟ್ರಸ್ಟ್​ಗೆ ಪರಿಶಿಷ್ಟ ಕೋಟಾದ ಅಡಿಯಲ್ಲಿ ಹೈಟೆಕ್​​ ಡಿಫೆನ್ಸ್​ ಫೋರ್ಸ್​ಗಾಗಿ ಮೀಸಲಿಟ್ಟ 49 ಎಕರೆಯಲ್ಲಿ 5 ಎಕರೆ ಜಮೀನು  ಕಾನೂನು ಬಾಹಿರವಾಗಿ ಭೂಮಿ ಹಂಚಿಕೆಯಾಗಿದೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ಸಿಎ(ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ಜಾಗ) ಸೈಟ್​ ಮಂಜೂರಾಗಿದೆ. ಒಂದು ಮನೆಗೆ ಸೀಮಿತವಾದ ಟ್ರಸ್ಟ್​ಗೆ ಜಾಗ ನೀಡಿದ್ದು ಸರಿಯಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

Post a comment

No Reviews