
ಉತ್ತರಾಖಂಡ್: ಚಾರಣಕ್ಕೆಂದು ಹೋದ ಸುಮಾರು 19 ಮಂದಿ ಚಾರಣಿಗರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಉತ್ತರಾಖಂಡ್‌ನಲ್ಲಿ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಕರ್ನಾಟಕದಿಂದ ಸುಮಾರು 19 ಮಂದಿಯ ತಂಡ ಟ್ರಕ್ಕಿಂಗ್‌ಗೆಂದು ಉತ್ತರಾಖಂಡ್‌ಗೆ ತೆರಳಿದ್ದರು. ಆದ್ರೆ ನಿನ್ನೆ ರಾತ್ರಿ ಉತ್ತರಾಖಂಡ್‌ನ ಎತ್ತರದ ಶಾಸ್ತ್ರತಾಳ್ ಮಯಳಿಗೆ ಎನ್ನುವ ಪ್ರದೇಶದಲ್ಲಿ ಟ್ರಕ್ಕಿಂಗ್ ಮಾಡುತ್ತಿದ್ದ ವೇಳೆ ಪ್ರತಿಕೂಲ ವಾತಾವರಣದಿಂದಾಗಿ ಅಪಾಯಕ್ಕೆ ಸಿಲುಕಿದ್ದಾರೆ. ಕೆಲವರನ್ನು ರಕ್ಷಣೆ ಮಾಡಲಾಗಿದ್ದು, ಕೊಖ್ಲಿ ಶಿಬಿರದಲ್ಲಿ ಇನ್ನಷ್ಟು ಚಾರಣಿಗರು ಸಿಲುಕಿದ್ದಾರೆ. ರಕ್ಷಣೆ ಮಾಡಿದ ಚಾರಣಿಗರು ಸೇಫ್ ಆಗಿ ಡೆಹರಾಡೂನ್ ತಲುಪಿದ್ದಾರೆ. ಕನ್ನಡಿಗರು ಅಪಾಯಕ್ಕೆ ಸಿಲುಕಿರುವ ಬಗ್ಗೆ ನಿನ್ನೆ ರಾತ್ರಿ ಮಾಹಿತಿ ಹೊರಬಿದ್ದಿದ್ದು, ರಾಜ್ಯ ಸರ್ಕಾರ ಅಪಾಯದಲ್ಲಿರುವ ಕನ್ನಡಿಗರ ರಕ್ಷಣೆಗೆ ನಿಂತಿದೆ. ಸಂಕಷ್ಟದಲ್ಲಿರುವ ಚಾರಣಿಗರನ್ನು ರಕ್ಷಿಸುವ ಸಲುವಾಗಿ ರಾಜ್ಯ ಸರ್ಕಾರ ಈಗಾಗಲೇ ಉತ್ತರಾಖಂಡ ಸರ್ಕಾರ ಹಾಗೂ ಕೇಂದ್ರ ಗೃಹ ಇಲಾಖೆಯೊಂದಿಗೆ ಸಂಪರ್ಕ ಮಾಡಿದೆ ಅಂತ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಚಾರಣಿಗರ ರಕ್ಷಣೆಗಾಗಿ ಭಾರತೀಯ ವಾಯುಪಡೆಯ ನಾಲ್ಕು ಹೆಲಿಕಾಪ್ಟರಗಳು ಇಂದು ಬೆಳಗ್ಗೆ 9 ಗಂಟೆಗೆ ಉತ್ತರಕಾಶಿ ತಲುಪಿ ತಮ್ಮ ಕಾರ್ಯಾಚರಣೆ ಆರಂಭಿಸಿವೆ. ಜೊತೆಗೆ ವಿಪತ್ತು ನಿರ್ವಹಣಾ ಪಡೆ ಭೂ ಮಾರ್ಗವಾಗಿ ಸ್ಥಳಕ್ಕೆ ದಾವಿಸಿದ್ದು, ಚಾರಣಿಗರ ರಕ್ಷಣೆಗೆ ಮುಂದಾಗಿದೆ.ಇತ್ತ ಕರ್ನಾಟಕ ಸರ್ಕಾರವು ಕೂಡ ಅಪಾಯದಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆಗಾಗಿ ಎಲ್ಲಾ ಪ್ರಯತ್ನಗಳನ್ನು ಆರಂಭಿಸಿದೆ.
Poll (Public Option)

Post a comment
Log in to write reviews