
ಬೆಂಗಳೂರು: ಬೆಂಗಳೂರಿನಲ್ಲಿ ಅನ್ಯ ಭಾಷಿಗರ ಸಂಖ್ಯೆ ಹೆಚ್ಚಾಗುತ್ತಿದೆ, ಕನ್ನಡ ಮರೆಯಾಗುತ್ತಿದೆ ಎಂಬ ಕೂಗು ಆಗಾಗ್ಗೆ ಕೇಳಿಬರುತ್ತಿರುತ್ತದೆ. ಆದರೆ, ಇಲ್ಲಿಗೆ ಬರುವವರ ಜತೆ ಅವರ ಭಾಷೆಯಲ್ಲಿಯೇ ಸ್ಥಳೀಯರು ಮಾತನಾಡುತ್ತಾರೆ ಬಿಟ್ಟರೆ ಅವರಿಗೆ ಇಲ್ಲಿನ ಭಾಷೆ ಮಾತನಾಡಲು ಕಲಿಸುವ ಪ್ರಯತ್ನ ಆಗುತ್ತಿಲ್ಲ. ಇದೀಗ ಆ ನಿಟ್ಟಿನಲ್ಲಿ ಆ್ಯಪ್ ಆಧಾರಿತ ಅಗ್ರಿಗೇಟರ್ಗಳಾದ ಓಲಾ ಹಾಗೂ ಉಬರ್ ಮಹತ್ವದ ಹೆಜ್ಜೆ ಇಟ್ಟಿವೆ.
ಆ್ಯಪ್ ಆಧಾರಿತ ಓಲಾ (Ola) ಹಾಗೂ ಉಬರ್ (Uber) ಹೊಸ ಪ್ರಯತ್ನಕ್ಕೆ ಮುಂದಾಗಿರುವ ಬಗ್ಗೆ ವರದಿಯಾಗಿದೆ. ಬೆಂಗಳೂರಿಗೆ (Bengaluru) ಬರುವವರಿಗೆ ಕೆಲವು ದಿನಗಳ ಮಟ್ಟಿಗೆ ಕನ್ನಡ (Kannada) ಮಾತನಾಡುವ ತರಬೇತಿ (Kannada-speaking classes) ನೀಡಲು ಉಭಯ ಸಂಸ್ಥೆಗಳು ತೀರ್ಮಾನಿಸಿವೆ. ಈ ವಿಚಾರವಾಗಿ ಎಎನ್ಐ ಸುದ್ದಿಸಂಸ್ಥೆ ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದೆ.
Poll (Public Option)

Post a comment
Log in to write reviews