
ಕಮಲ್ ಹಾಸನ್ ಹಾಗೂ ಆರ್. ಶಂಕರ್ ಜೋಡಿಯ ʼಇಂಡಿಯನ್ 2ʼ ಸಿನಿಮಾ ವಿಶ್ವದಾದ್ಯಂತ ಜುಲೈ 12 ಕ್ಕೆ ಬಿಡುಗಡೆಯಾಗಲಿದೆ.
ಚಿತ್ರದ ಟೀಸರ್ ಹಾಗೂ ಹಾಡೊಂದು ಪ್ರೇಕ್ಷಕರಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ. ಇದೀಗ ಚಿತ್ರದ ಎರಡನೇ ಹಾಡು ಅನಾವರಣಗೊಂಡಿದೆ. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಈ ಹಾಡು ಬಿಡುಗಡೆಯಾಗಿದ್ದು. 'ಬೊಮ್ಮರಿಲ್ಲು' ಸಿದ್ದಾರ್ಥ್ ಹಾಗೂ ರಾಕುಲ್ ಪ್ರೀತ್ ಸಿಂಗ್ ಜೋಡಿಯ ಪ್ರೇಮಗೀತೆ ಇದಾಗಿದೆ.
ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆಯ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದ ಇಂಡಿಯನ್ 1, 1996 ರಲ್ಲಿ ಬಿಡುಗಡೆಗೊಂಡು ಹಿಟ್ ಚಿತ್ರ ಎನಿಸಿತ್ತು. ಇಂಡಿಯನ್ 2 ಇದರ ಮುಂದುವರಿದ ಭಾಗವಾಗಿದ್ದು, ಈ ಚಿತ್ರದಲ್ಲೂ ಕೂಡ ಕಮಲ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದೆ ಎನ್ನಲಾಗಿದೆ.
Poll (Public Option)

Post a comment
Log in to write reviews